MUGHLAI ALU ಮೊಗಲೈ ಆಲೂ
( No onion, no garlic )
ಆಲೂಗೆಡ್ಡೆಯಿಂದ ಮಾಡಬಹುದಾದ ಬಾಯಲ್ಲಿ ನೀರೂರಿಸುವ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ:-
2 ಚಮಚ ಗಸಗಸೆ, 10 ಗೋಡಂಬಿ ಸ್ವಲ್ಪ ಬಿಸಿ ನೀರಿನಲ್ಲಿ ನೆನೆಸಿ ನುಣ್ಣಗೆ ರುಬ್ಬಿಡಿ.
ಬೇಬಿ ಆಲೂಗೆಡ್ಡೆ ಉಪ್ಪು ಹಾಕಿ ಬೇಯಿಸಿ ಸಿಪ್ಪೆ ತೆಗೆದು ಅಲ್ಲಲ್ಲಿ ಫೋರ್ಕ್ ನಿಂದ ಚುಚ್ಚಿಡಿ. ಹೀಗೆ ಚುಚ್ಚಿದರೆ ಆಲೂಗೆಡ್ಡೆಗೆ ಉಪ್ಪು ಖಾರ ಚೆನ್ನಾಗಿ ಅಂಟುತ್ತದೆ. ಬೇಬಿ ಆಲೂಗೆಡ್ಡೆ ಸಿಗದಿದ್ದರೆ ಸಾಧಾರಣ ಆಲೂಗೆಡ್ಡೆ ದೊಡ್ಡ ದೊಡ್ಡದಾಗಿ ಹೆಚ್ಚಿ ಉಪಯೋಗಿಸಬಹುದು.

ಅರ್ಧ ಬಟ್ಟಲು ಗಟ್ಟಿಯಾದ ಸಿಹಿ ಮೊಸರಿಗೆ ಒಂದು ಚಮಚ ಖಾರದ ಪುಡಿ, 1/4 ಚಮಚ ಅರಿಷಿಣ, 1/2 ಚಮಚ ಗರಂ ಮಸಾಲ, 1/4 ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಬೇಯಿಸಿದ ಆಲೂಗೆಡ್ಡೆ ಹಾಕಿ ಎಚ್ಚರಿಕೆಯಿಂದ ಕಲೆಸಿ ಒಂದು ಗಂಟೆ ನೆನೆಸಿಡಿ.

ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಜೀರಿಗೆ ಹಾಕಿ ನಂತರ ಮೊಸರಿನ ಮಿಶ್ರಣ ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ ಸ್ವಲ್ಪ ಬಿಸಿ ಮಾಡಿ ನಂತರ ರುಬ್ಬಿದ ಗಸಗಸೆ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಎಣ್ಣೆ ಮೇಲುಗಡೆ ತೇಲುವವರೆಗೆ ಕುದಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಎರಡು ಚಮಚ ತಾಜಾ ಹಾಲಿನ ಕೆನೆ ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಮೊಗಲೈ ಆಲೂ ಸವಿಯಲು ಸಿದ್ಧ!


ಈ ರೆಸಿಪಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸಿಲ್ಲ. ಬೇಕಾದರೆ ಹಾಕಿಕೊಳ್ಳಬಹುದು.
ಧನ್ಯವಾದಗಳು 🙏🙏🙏
