ಉಪಹಾರ

GODHI DOSE & BADAM CHUTNEY ಗೋಧಿ ದೋಸೆ ಮತ್ತು ಬಾದಾಮಿ ಚಟ್ನಿ

GODHI DOSE & BADAM CHUTNEY ಗೋಧಿ ದೋಸೆ ಮತ್ತು ಬಾದಾಮಿ ಚಟ್ನಿ

ಬೆಳಿಗ್ಗೆ ತಿಂಡಿಗೆ ದಿಢೀರ್ ಎಂದು ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ.

ಗೋಧಿ ದೋಸೆ :-

1 ಅಳತೆ ಗೋಧಿ ಹಿಟ್ಟು, 1/2 ಅಳತೆ ಅಕ್ಕಿ ಹಿಟ್ಟು, 1/2 ಅಳತೆ ಚಿರೋಟಿ ರವೆ, 1/2 ಇಂಚು ತುರಿದ ಶುಂಠಿ, 1/2 ಚಮಚ ಹುರಿದು ಪುಡಿ ಮಾಡಿದ ಜೀರಿಗೆ, ಮೆಣಸು ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ 2 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲೆಸಿ ಸಾಕಷ್ಟು ನೀರು ಹಾಕಿ ತೆಳ್ಳಗೆ ಹಿಟ್ಟು ಕಲೆಸಿಡಿ. ರವೆ ದೋಸೆಯ ಹದಕ್ಕೆ ನೀರಾಗಿರಬೇಕು. ಸಣ್ಣಗೆ ಹೆಚ್ಚಿದ ಈರುಳ್ಳಿ ಬೇಕಾದರೆ ಹಾಕಿಕೊಳ್ಳಬಹುದು. ಹದಿನೈದು ನಿಮಿಷದ ನಂತರ ಕಾದ ಕಾವಲಿಯ ಮೇಲೆ ತೆಳ್ಳಗೆ ಹರಡಿ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಗೋಧಿ ದೋಸೆ ಸವಿಯಲು ಸಿದ್ಧ.

ಬಾದಾಮಿ ಚಟ್ನಿ:-

ಪ್ರತಿ ದಿನ ಕಾಯಿ ಚಟ್ನಿ ತಿಂದು ಬೇಸರವಾಗಿದ್ದರೆ ಹೀಗೆ ಆರೋಗ್ಯಕರವಾದ, ರುಚಿಕರವಾದ ಬಾದಾಮಿ ಚಟ್ನಿ ಮಾಡಿ ನೋಡಿ.

ನಿಮಗೆ ಬೇಕಾಗುವಷ್ಟು ಬಾದಾಮಿ ನೀರಿನಲ್ಲಿ ಎರಡು ಗಂಟೆ ನೆನೆಸಿ ಸಿಪ್ಪೆ ತೆಗೆದಿಡಿ.

ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಖಾರಕ್ಕೆ ಬೇಕಾಗುವಷ್ಟು ಹಸಿ ಮೆಣಸಿನಕಾಯಿ ಸೀಳಿ ಹಾಕಿ ಬಾಡಿಸಿ ಸಿಪ್ಪೆ ತೆಗೆದ ಬಾದಾಮಿ, ಅರ್ಧ ಹೋಳು ನಿಂಬೆ ರಸ, ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿದರೆ ವಿಶೇಷ ರುಚಿಯಾದ ಬಾದಾಮಿ ಚಟ್ನಿ ಸವಿಯಲು ಸಿದ್ಧ!

ಧನ್ಯವಾದಗಳು 🙏🙏🙏

Leave a Reply

Your email address will not be published.