ಸುಲಭವಾಗಿ ಮಾಡಬಹುದಾದ ರುಚಿಯಾದ ಬರ್ಫಿ! ಎಳೆ ಪಾಕ ತೆಗೆಯುವ ಅವಶ್ಯಕತೆ ಇಲ್ಲ! ಹೊಸದಾಗಿ ಅಡುಗೆ ಕಲಿಯುವವರು ಕೂಡ ಮಾಡಬಹುದು!
ಮಾಡುವ ವಿಧಾನ:-
1 ಅಳತೆ ಬಿಳಿ ಎಳ್ಳು ಸಣ್ಣ ಉರಿಯಲ್ಲಿ ಪಟ ಪಟ ಎಂದು ಶಬ್ದ ಬರುವ ಹಾಗೆ ಹುರಿದಿಡಿ.
1 ಅಳತೆ ಬೆಲ್ಲ ಪುಡಿ ಮಾಡಿಡಿ.

ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಕರಗಿದ ಮೇಲೆ ಬೆಲ್ಲದ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಬೆಲ್ಲವನ್ನು ಸಂಪೂರ್ಣವಾಗಿ ಕರಗಿಸಿ.

ಬೆಲ್ಲ ನೊರೆ ನೊರೆಯಾಗಿ ಆದ ತಕ್ಷಣ ಹುರಿದ ಎಳ್ಳು ಹಾಕಿ ಚೆನ್ನಾಗಿ ಕಲೆಸಿ. ಬೇಕಾದರೆ ಸ್ವಲ್ಪ ಏಲಕ್ಕಿ ಪುಡಿ ಹಾಕಿ.
ತುಪ್ಪ ಸವರಿದ ಚಪಾತಿ ಮಾಡುವ ಮಣೆಯ ಮೇಲೆ ಈ ಮಿಶ್ರಣವನ್ನು ಹರಡಿ. ಲಟ್ಟಣಿಗೆಗೆ ಸ್ವಲ್ಪ ತುಪ್ಪ ಸವರಿ ಸ್ವಲ್ಪ ತೆಳ್ಳಗೆ ಮಾಡಿ.

ತಣ್ಣಗಾದ ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.
ಧನ್ಯವಾದಗಳು ![]()
![]()
![]()