Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

KOBBARI LADDU ಕೊಬ್ಬರಿ ಲಡ್ಡು

ಹಬ್ಬ ಬಂದರೆ ಗೃಹಿಣಿಯರಿಗೆ ಕೈ ತುಂಬಾ ಕೆಲಸ! ಮನೆ ಕ್ಲೀನ್, ಶಾಪಿಂಗ್ , ಹಬ್ಬದ ಸಿದ್ಧತೆ ಹೀಗೆ!
ಹಬ್ಬ ಎಂದ ಮೇಲೆ ಸಿಹಿ ತಿಂಡಿ ಇರಲೇಬೇಕು! ಅದರಲ್ಲೂ ಬೇಗ ಆಗುವ ತಿಂಡಿ ಇದ್ದರೆ ಎಷ್ಟು ಚೆಂದ ಅಲ್ಲವೇ? ಸುಲಭವಾಗಿ, ಬೇಗ ಮಾಡುವ ರೆಸಿಪಿ ಇದು!

ಕೊಬ್ಬರಿ ಲಡ್ಡು ಮಾಡುವ ವಿಧಾನ:-

1 ಅಳತೆ ಕಾಯಿ ತುರಿಯನ್ನು ಬಾಣಲೆಯಲ್ಲಿ ಎಣ್ಣೆ ಹಾಕದೆ ಕಡಿಮೆ ಉರಿಯಲ್ಲಿ ಸ್ವಲ್ಪ ನೀರಿನಂಶ ಹೋಗುವವರೆಗೆ ಹುರಿಯಿರಿ. 2 ರಿಂದ 3 ನಿಮಿಷ ಸಾಕು. ನಂತರ 1/4 ಅಳತೆ ಹಾಲು ಹಾಕಿ ಸ್ವಲ್ಪ ಬೇಯಿಸಿ, ಸ್ವಲ್ಪ ಸಮಯದ ನಂತರ 1 ಅಳತೆ ಸಕ್ಕರೆ ಪುಡಿ ಹಾಕಿ ಸ್ವಲ್ಪ ಬೇಯಿಸಿ. ಮಿಶ್ರಣ ಗಟ್ಟಿಯಾದಾಗ ಒಲೆಯಿಂದ ಇಳಿಸಿ.

   

ಬೆಚ್ಚಗಿರುವಾಗಲೇ ಚಿಕ್ಕ ಚಿಕ್ಕದಾಗಿ ಉಂಡೆ ಮಾಡಿ ಕಾಯಿ ತುರಿ ಮೇಲೆ ಹೊರಳಿಸಿ ಸ್ವಲ್ಪ ತಣ್ಣಗಾದ ಮೇಲೆ ತಿನ್ನಲು ಕೊಡಿ.

ನೀವು ಬೇಕಾದರೆ ಸಣ್ಣಗೆ ಹೆಚ್ಚಿದ ಡ್ರೈ ಫ್ರೂಟ್ಸ್ ಉಂಡೆ ಮಾಡುವಾಗ ಹಾಕಬಹುದು.

   

1 ಅಳತೆ ಕಾಯಿ ತುರಿಗೆ 1 ಅಳತೆ Condensed milk ಹಾಕಿ ಉಂಡೆ ಮಾಡಬಹುದು. ಆಗ ಹಾಲು ಹಾಕುವ ಅಗತ್ಯವಿಲ್ಲ.

ಕಾಯಿ ತುರಿ ಬದಲು Dessicated coconut ಹಾಕಬಹುದು. 1 ನಿಮಿಷ ಕಡಿಮೆ ಉರಿಯಲ್ಲಿ ಹುರಿದು ಮಾಡಬಹುದು. ನಾನು ಮಾಡಿರುವುದು Dessicated coconut ನಲ್ಲಿ‌.

ನೀವು ಹಸಿ ಕಾಯಿ ತುರಿ ಹಾಕಿ ಮಾಡುವುದಾದರೆ ಕೇವಲ ಬಿಳಿ ಭಾಗ ಮಾತ್ರ ತುರಿದು ಹಾಕಿ ಮಾಡಿ.

ಧನ್ಯವಾದಗಳು.

Leave a Reply

Your email address will not be published.