Kannada ಉಪಹಾರ

BROKEN WHEAT PONGAL ಬ್ರೋಕನ್ ವೀಟ್ ಪೊಂಗಲ್

ಈಗಿನ ಯುವ ಜನತೆ ಹೆಚ್ಚಿನವರು ಡಯಟ್, ಕ್ಯಾಲೋರಿಯ ಬಗ್ಗೆ ತುಂಬಾ ಯೋಚನೆ ಮಾಡುತ್ತಾರೆ. ಹಾಗೆಂದು ಹೊಟ್ಟೆ ತುಂಬಾ ತಿನ್ನದೆ ಊಟ ಬಿಡುವುದು ಕೂಡ ತಪ್ಪು!
ಇಂತಹವರಿಗಾಗಿ ಇಲ್ಲಿದೆ ಬೇಗ ಹೊಟ್ಟೆ ತುಂಬುವ, ರುಚಿಯಾಗಿರುವ, ಕಡಿಮೆ ಕ್ಯಾಲೋರಿಯ, ಸುಲಭವಾಗಿ ಮಾಡುವ ರೆಸಿಪಿ!ಬ್ರೋಕನ್ ವೀಟ್ ಪೊಂಗಲ್ ಮಾಡುವ ವಿಧಾನ:-

1 ಲೋಟ ಬ್ರೋಕನ್ ವೀಟ್, 1/2 ಲೋಟ ಹೆಸರು ಬೇಳೆ ಎಣ್ಣೆ ಹಾಕದೆ ಸ್ವಲ್ಪ ಹುರಿದು ತೊಳೆದು ನೀರು ಸೋರಿ ಹಾಕಿಡಿ.

ನಿಮಗೆ ಇಷ್ಟವಾದ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.

   

ಕುಕ್ಕರಿನಲ್ಲಿ 2 ಚಮಚ ಎಣ್ಣೆ ಹಾಕಿ, ಜೀರಿಗೆ, ಚಿಟಿಕೆ ಇಂಗು, ಚಿಟಿಕೆ ಅರಿಶಿಣ, ತುರಿದ ಶುಂಠಿ, ಹಸಿ ಮೆಣಸಿನ ಕಾಯಿ ಪೇಸ್ಟ್ 1/2 ಚಮಚ, ಹೆಚ್ಚಿದ ತರಕಾರಿ ಹಾಕಿ ಸ್ವಲ್ಪ ಹುರಿದು ಸೋರಿ ಹಾಕಿದ ಗೋಧಿ ನುಚ್ಚು, ಹೆಸರು ಬೇಳೆ ಹಾಕಿ ಸ್ವಲ್ಪ ಹುರಿದು ಉಪ್ಪು 4 ಲೋಟ ನೀರು ಸೇರಿಸಿ ಕಲೆಸಿ ಮುಚ್ಚಳ ಮುಚ್ಚಿ 4 ವಿಷಲ್ ಕೂಗಿಸಿ.

ನಂತರ ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು, ನಿಂಬೆ ರಸ ( ಬೇಕಾದರೆ) ಹಾಕಿ, ಗಟ್ಟಿಯಾಗಿ ಇದ್ದರೆ ಸ್ವಲ್ಪ ನೀರು ಸೇರಿಸಿ ಕಲೆಸಿ ಮೆಾಸರು ಬಜ್ಜಿಯೆಾಂದಿಗೆ ಬಿಸಿಯಾಗಿ ಬಡಿಸಿ.

   

ತರಕಾರಿ ಹೆಚ್ಚು ಹಾಕಿದಷ್ಟೂ ಚೆನ್ನಾಗಿರುತ್ತದೆ. ಬೇಕಾದರೆ ಬಟಾಣಿ, ಕಾಳು, ಸೊಪ್ಪು ಹಾಕಿ ಕೂಡ ಮಾಡಬಹುದು.

ಗೋಧಿ ನುಚ್ಚು ಮತ್ತು ಹೆಸರು ಬೇಳೆ ಬೆಂದ ಮೇಲೆ ಒದಗುತ್ತೆ! ಅಂದರೆ Quantity ಹೆಚ್ತಾಗುತ್ತದೆ. ಜೊತೆಯಲ್ಲಿ ತರಕಾರಿ ಕೂಡ ಹಾಕುವುದರಿಂದ ಚಿಕ್ಕ ಲೋಟದ ಅಳತೆಯಲ್ಲಿ ಮಾಡಿದರೂ ಸಾಕಾಗುತ್ತೆ.

ಈ ಪೊಂಗಲ್ ತಿಂದರೆ ಬೇಗನೆ ಹೊಟ್ಟೆ ತುಂಬುತ್ತದೆ. ಹೆಚ್ಚು ಎಣ್ಣೆ , ತುಪ್ಪ, ಕಾಯಿ ತುರಿ ಹಾಕಿಲ್ಲ! ಡಯಟ್ ಮಾಡುವವರಿಗೆ ಒಳ್ಳೆಯ ಆಹಾರ!

ಧನ್ಯವಾದಗಳು.

Leave a Reply

Your email address will not be published.