Starters Tindi Tinisu

CHEESE SWEET CORN BALLS ಚೀಸ್ ಸ್ವೀಟ್ ಕಾರ್ನ್ ಬಾಲ್ಸ್

CHEESE SWEET CORN BALLS  ಚೀಸ್ ಸ್ವೀಟ್ ಕಾರ್ನ್ ಬಾಲ್ಸ್

ಸುಲಭವಾಗಿ ಮಾಡಬಹುದ ಬಾಯಲ್ಲಿ ನೀರೂರಿಸುವ ವಿಧಾನ ಇಲ್ಲಿದೆ:-

ಮಾಡುವ ವಿಧಾನ:-

ಒಂದು ಆಲೂಗಡ್ಡೆ, 100 ಗ್ರಾಂ ಸ್ವೀಟ್ ಕಾರ್ನ್ ಬೇಯಿಸಿ, ಆಲೂಗಡ್ಡೆ ಸಿಪ್ಪೆ ತೆಗೆದು ಪುಡಿ ಮಾಡಿಡಿ.

100 ಗ್ರಾಂ ಚೀಸ್ ತುರಿದಿಡಿ.

ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಎರಡು ಹಸಿ ಮೆಣಸಿನ ಕಾಯಿ ಪೇಸ್ಟ್ ಮಾಡಿಡಿ.

ಎರಡು ಚಮಚ ಕಾರ್ನ್ ಫ್ಲೋರ್, ಎರಡು ಚಮಚ ಮೈದಾ ಹಿಟ್ಟು ಚಿಟಿಕೆ ಉಪ್ಪು ಹಾಕಿ ನೀರು ಹಾಕಿ ತೆಳ್ಳಗೆ ಕಲೆಸಿಡಿ.

ಆಲೂಗೆಡ್ಡೆ ಪುಡಿ, ಸ್ವೀಟ್ ಕಾರ್ನ್, ತುರಿದ ಚೀಸ್, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಚಾಟ್ ಮಸಾಲಾ, ಹಸಿ ಮೆಣಸಿನ ಕಾಯಿ ಪೇಸ್ಟ್, ಎರಡು ಚಮಚ ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಕಲೆಸಿ ಪುಟ್ಟ ಪುಟ್ಟ ಮಾಡಿ ಮಧ್ಯೆ ಬೇಕಾದರೆ ಚಿಕ್ಕ ಚೀಸ್ ತುಂಡು ಇಟ್ಟು, ಗುಂಡಗೆ ಮಾಡಿ, ಮೈದಾ ಹಿಟ್ಟು ಮಿಶ್ರಣದಲ್ಲಿ ಅದ್ದಿ, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದು ನಿಮಗೆ ಇಷ್ಟವಾದ ಚಟ್ನಿ ಅಥವಾ ಸಾಸ್ ಜೊತೆಗೆ ಸವಿಯಿರಿ.

ಈ ಚೀಸ್ ಬಾಲ್ಸ್ ಹೊರಗಡೆ ಗರಿ ಗರಿಯಾಗಿ, ಒಳಗಡೆ ಮೃದುವಾಗಿರುತ್ತದೆ. ಮಕ್ಕಳಿಗಂತೂ ತುಂಬಾ ಇಷ್ಟ ಆಗುತ್ತದೆ. ಹಾಗಾದರೆ ಒಂದು ಸಲ ಮಾಡಿ ನೋಡ್ತೀರ ಅಲ್ಲವೇ?

ಧನ್ಯವಾದಗಳು 🙏🙏🙏

Leave a Reply

Your email address will not be published.