ಉಪಹಾರ

MATODI CHITRANNA ಮಾಟೋಡಿ ಚಿತ್ರಾನ್ನ

MATODI CHITRANNA ಮಾಟೋಡಿ ಚಿತ್ರಾನ್ನ

ಇದು ನನ್ನ ಪತಿಯ ಅಜ್ಜಿ ಮಾಡುತ್ತಿದ್ದ ವಿಧಾನ! ಯಾವಾಗಲೂ ಮಾಡುವ ವಿಧಾನ ಬೇಜಾರಾಗಿದ್ದರೆ ಹೀಗೆ ಒಂದು ಸಲ ಮಾಡಿ ನೋಡಿ. ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ.

ಮಾಡುವ ವಿಧಾನ:-

ಎರಡು ಚಮಚ ಕಡಲೆ ಬೇಳೆ ಎರಡು ಗಂಟೆ ನೆನೆಸಿಡಿ. ನಾಲ್ಕು ದೊಡ್ಡ ಚಮಚ ಕಾಯಿ ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಕಡಲೆ ಬೇಳೆ ನೀರು ಸೋರಿ ಹಾಕಿ, ಕಾಯಿ ತುರಿ, ಕೊತ್ತಂಬರಿ ಸೊಪ್ಪು, ನಾಲ್ಕು ಹಸಿ ಮೆಣಸಿನಕಾಯಿ ಜೊತೆಗೆ ವಡೆಗೆ ರುಬ್ಬಿದ ಹಾಗೆ ತರಿತರಿಯಾಗಿ ನೀರು ಸೇರಿಸದೆ ರುಬ್ಬಿಡಿ.

ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಕಡಲೆ ಬೀಜ ಕರಿದು ತೆಗೆದಿಡಿ. ನಂತರ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿ ಬೇವು, ಚಿಟಿಕೆ ಅರಿಶಿನ, ಇಂಗು ಹಾಕಿ ಹುರಿದು, ನಂತರ ರುಬ್ಬಿದ ಮಿಶ್ರಣ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನೀರಿನಂಶ ಹೋಗುವವರೆಗೆ ಹುರಿದು ಅನ್ನ, ನಿಂಬೆ ರಸ ಹಾಕಿ ಕಲೆಸಿ, ಕೊನೆಯಲ್ಲಿ ಕಡಲೆ ಬೀಜ ಹಾಕಿದರೆ, ರುಚಿಯಾದ, ಬಾಯಲ್ಲಿ ನೀರೂರಿಸುವ ಮಾಟೋಡಿ ಚಿತ್ರಾನ್ನ ಸವಿಯಲು ಸಿದ್ಧ!

ಧನ್ಯವಾದಗಳು 🙏🙏🙏

Leave a Reply

Your email address will not be published.