SWEET CORN TOAST ಸ್ವೀಟ್ ಕಾರ್ನ್ ಟೋಸ್ಟ್
ಸುಲಭವಾಗಿ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ:-
ಸ್ವೀಟ್ ಕಾರ್ನ್ ಬೇಯಿಸಿಡಿ. 1 ಈರುಳ್ಳಿ, 1 ಕ್ಯಾಪ್ಸಿಕಂ, 1 ಟೊಮ್ಯಾಟೋ, ಎರಡು ಹಸಿ ಮೆಣಸಿನ ಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಜೀರಿಗೆ, ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ, ನಂತರ ಕ್ಯಾಪ್ಸಿಕಂ, ಹಸಿ ಮೆಣಸಿನ ಕಾಯಿ , ಉಪ್ಪು ಹಾಕಿ ಬಾಡಿಸಿ, ನಂತರ ಬೇಯಿಸಿದ ಸ್ವೀಟ್ ಕಾರ್ನ್, ಕೊತ್ತಂಬರಿ ಸೊಪ್ಪು , ಒಂದು ಚಮಚ ಫ್ರೆಶ್ ಕ್ರೀಮ್, ಸ್ವಲ್ಪ ನಿಂಬೆ ರಸ ಸೇರಿಸಿ ಒಲೆಯಿಂದ ಇಳಿಸಿ.

ನೂರು ಗ್ರಾಂ ಚೀಸ್ ತುರಿದಿಡಿ.

ಬಿಸಿ ಕಾವಲಿಯ ಮೇಲೆ ಎರಡು ಬ್ರೆಡ್ ಸ್ಲೈಸ್ ಹಾಕಿ, ಸ್ವಲ್ಪ ಬೆಣ್ಣೆ ಕಡಿಮೆ ಉರಿಯಲ್ಲಿ ಸ್ವಲ್ಪ ಬೇಯಿಸಿ, ತಿರುವಿ ಹಾಕಿ ಇನ್ನೊಂದು ಕಡೆ ಸ್ವಲ್ಪ ಬೆಣ್ಣೆ ಸವರಿ ಮೇಲೆ ಸ್ವೀಟ್ ಕಾರ್ನ್ ಮಿಶ್ರಣ ಹರಡಿ, ಅದರ ಮೇಲೆ ಚೀಸ್ ತುರಿ ಹರಡಿ, ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಚೀಸ್ ಕರಗುವವರೆಗೆ ಎರಡು ಅಥವಾ ಮೂರು ನಿಮಿಷ ಬೇಯಿಸಿ, ಸಾಸ್ ಜೊತೆಗೆ ಬಿಸಿಯಾಗಿ ಸವಿಯಿರಿ.

ಧನ್ಯವಾದಗಳು 🙏🙏🙏
