Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MANGO LADDU ಮ್ಯಾಂಗೋ ಲಡ್ಡು

ಮಾಡುವ ವಿಧಾನ:-

  

1 ಅಳತೆ desiccated coconut powder ಅನ್ನು (ಸೂಪರ್ ಮಾರ್ಕೆಟ್ ನಲ್ಲಿ ಸಿಗುತ್ತೆ, ಕೇಕ್, ಸ್ವೀಟ್ಸ್ ಮಾಡಲು ಉಪಯೋಗಿಸುತ್ತಾರೆ) ದಪ್ಪ ತಳದ ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ 2 ಅಥವಾ 3 ನಿಮಿಷ ಹುರಿದು, 1/2 ಅಳತೆ ಮಾವಿನ ಹಣ್ಣಿನ ರಸ, (ನೀರು ಸೇರಿಸಬೇಡಿ), 1/2 ಅಳತೆ condensed milk ಹಾಕಿ ಕಡಿಮೆ ಉರಿಯಲ್ಲಿ ಕೆದಕುತ್ತಾ ಇರಿ, ಮಿಶ್ರಣ ಎಲ್ಲಾ ಒಂದೇ ಕಡೆ ಉಂಡೆಯಂತೆ ಆದಾಗ ಒಲೆಯಿಂದ ತೆಗೆದು ಇಡಿ, ಸ್ವಲ್ಪ ಬೆಚ್ಚಗೆ ಆದಾಗ ಚಿಕ್ಕ ಚಿಕ್ಕ ಉಂಡೆ ಮಾಡಿ, desiccated coconut powder ಮೇಲೆ ಹೊರಳಿಸಿ, ತಿನ್ನಲು ಕೊಡಿ.

   

Desiccated coconut ಸಿಗದಿದ್ದರೆ ಹಸಿ ಕಾಯಿ ತುರಿ 7 ಅಥವಾ 8 ನಿಮಿಷ ಹುರಿದು ಇದೇ ರೀತಿ ಮಾಡಿ. ಹಣ್ಣು ಹಾಕಿರುವುದರಿಂದ ಆ ದಿನವೇ ತಿನ್ನಬೇಕು. ರುಚಿ ಅದ್ಭುತ, ರಿಚ್ ಆಗಿರುತ್ತದೆ, soft n sweet, ಮಾಡಿ ನೋಡಿ.

Thank You.

Leave a Reply

Your email address will not be published.