ಸಿಹಿ ತಿನಿಸುಗಳು

KADALE BEEJADA BURFI ಕಡಲೇ ಬೀಜದ ಬರ್ಫಿ

ಸುಲಭವಾಗಿ ಮಾಡಬಹುದಾದ ಆರೋಗ್ಯಕರವಾದ ಸಿಹಿಯ ರೆಸಿಪಿ ನಿಮಗಾಗಿ!

ಮಾಡುವ ವಿಧಾನ:-

1 ಅಳತೆ ಕಡಲೇ ಬೀಜ ಗರಿ ಗರಿಯಾಗಿ ಹುರಿದು ಸಿಪ್ಪೆ ತೆಗೆದು ನುಣ್ಣಗೆ ಪುಡಿ ಮಾಡಿಡಿ.

1 ಅಳತೆ ಬೆಲ್ಲ ಪುಡಿ ಮಾಡಿಡಿ.

ಸ್ವಲ್ಪ ಏಲಕ್ಕಿ ಪುಡಿ ಮಾಡಿಡಿ.

ಬಾಣಲೆಯಲ್ಲಿ ಬೆಲ್ಲದ ಜೊತೆಗೆ ಕಾಲು ಭಾಗದಷ್ಟು ನೀರು ಹಾಕಿ ಪಾಕ ಬರಲು ಬಿಡಿ. ಒಂದೆಳೆ ಪಾಕ ಬಂದೊಡನೆ ಕಡಲೇ ಬೀಜದ ಪುಡಿ ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚೆನ್ನಾಗಿ ಕಲೆಸಿ.

ಜೊತೆಗೆ 4 ಚಮಚ ತುಪ್ಪ ಹಾಕಿ.

ಕಡಿಮೆ ಉರಿಯಲ್ಲಿ ಮಿಶ್ರಣವೆಲ್ಲಾ ಒಂದೇ ಉಂಡೆಯಂತೆ ಆದಾಗ ಒಲೆಯಿಂದ ಇಳಿಸಿ ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ!

ಧನ್ಯವಾದಗಳು!

Leave a Reply

Your email address will not be published.