Oota

PANEER BIRIYANI ಪನ್ನೀರ್ ಬಿರಿಯಾನಿ

ಪನ್ನೀರ್ ಬಹಳ ರುಚಿಯಾದ, ಆರೋಗ್ಯಕರವಾದ ಹಾಲಿನ ಪದಾರ್ಥ!ಇದರಿಂದ ಮಾಡಬಹುದಾದ ರುಚಿಯಾದ ಬಿರಿಯಾನಿ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

4 ಹಸಿ ಮೆಣಸಿನಕಾಯಿ, 1 ಬೆಳ್ಳುಳ್ಳಿ, 1 ಇಂಚು ಶುಂಠಿ ಸಿಪ್ಪೆ ತೆಗೆದು ಪೇಸ್ಟ್ ಮಾಡಿಡಿ. ಅರ್ಧ ಅಕ ಜೊತೆಗೆ ಹಾಕಿ. ಇನ್ನರ್ಧ ಗ್ರೇವಿಗೆ ಹಾಕಲು ಇಡಿ.

1 ಲೋಟ ಬಾಸುಮತಿ ಅಕ್ಕಿ ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ.

 

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ ಹಾಕಿ ಹುರಿದು ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ ಪೇಸ್ಟ್ ಅರ್ಧ, ಸ್ವಲ್ಪ ಉಪ್ಪು ಹಾಕಿ ಬಾಡಿಸಿ. ನಂತರ ನೆನೆಸಿದ ಅಕ್ಕಿ ಹಾಕಿ ಕಲೆಸಿ 1 ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಅಕ್ಕಿ ಪೂರ್ತಿಯಾಗಿ ಬೇಯುವವರೆಗೆ ಬೇಯಿಸಿಡಿ.

 

200 ಗ್ರಾಂ ಪನ್ನೀರ್ ಚಿಕ್ಕ ಚಿಕ್ಕದಾಗಿ ಹೆಚ್ಚಿ 1 ಚಿಕ್ಕ ಚಮಚ ಖಾರದ ಪುಡಿ, ಉಪ್ಪು, 1 ಚಮಚ ಗಟ್ಟಿಯಾದ ಮೊಸರು ಹಾಕಿ ಚೆನ್ನಾಗಿ ಕಲೆಸಿ, 15 ನಿಮಿಷದ ನಂತರ ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಹುರಿದಿಡಿ.

1 ಈರುಳ್ಳಿ ಸಣ್ಣಗೆ ಹೆಚ್ಚಿ, ಕೆಂಪಗೆ ಹುರಿದಿಡಿ. ಸ್ವಲ್ಪ ಗೋಡಂಬಿ ಹುರಿದಿಡಿ.

ಸ್ವಲ್ಪ ಕೊತ್ತಂಬರಿ, ಪುದೀನಾ ಸಣ್ಣಗೆ ಹೆಚ್ಚಿಡಿ.

ಗ್ರೇವಿಗೆ:-

1 ಈರುಳ್ಳಿ, 2 ಟೋಮೋಟೋ ಸಣ್ಣಗೆ ಹೆಚ್ಚಿ ನೀರು ಹಾಕದೆ ನುಣ್ಣಗೆ ರುಬ್ಬಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಜೀರಿಗೆ, ಹಸಿ ಮೆಣಸಿನಕಾಯಿ ಪೇಸ್ಟ್ ಅರ್ಧ, ಅರಿಷಿಣ, 1/2 ಚಮಚ ಗರಂ ಮಸಾಲ, ಸ್ವಲ್ಪ ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಸ್ವಲ್ಪ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿಡಿ.

ಒಂದು ಕುಕ್ಕರಿನಲ್ಲಿ ಅರ್ಧ ಭಾಗ ಗ್ರೇವಿ ಹಾಕಿ, ಅದರ ಮೇಲೆ ಅರ್ಧ ಭಾಗ ಪನ್ನೀರ್ ಹಾಕಿ. ಅದರ ಮೇಲೆ ಅರ್ಧ ಭಾಗ ಅನ್ನ ಹಾಕಿ, ಸ್ವಲ್ಪ ಕೊತ್ತಂಬರಿ, ಪುದೀನಾ ಉದುರಿಸಿ.

ಅನ್ನದ ಮೇಲೆ ಉಳಿದ ಗ್ರೇವಿ, ಉಳಿದ ಪನ್ನೀರ್, ಉಳಿದ ಅನ್ನ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಹುರಿದ ಗೋಡಂಬಿ, ಈರುಳ್ಳಿ ಉದುರಿಸಿ ಮುಚ್ಚಳ ಮುಚ್ಚಿ.

ಒಂದು ಕಬ್ಬಿಣದ ಕಾವಲಿಯನ್ನು ಬಿಸಿಯಾಗಲು ಇಡಿ. ಅದರ ಮೇಲೆ ಕುಕ್ಕರ್ ಇಟ್ಟು ವೇಟ್ ಹಾಕದೆ ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷ ಬೇಯಿಸಿದರೆ, ಬಾಯಲ್ಲಿ ನೀರೂರಿಸುವ ಪನ್ನೀರ್ ಬಿರಿಯಾನಿ ಸವಿಯಲು ಸಿದ್ಧ!

ಧನ್ಯವಾದಗಳು!

Leave a Reply

Your email address will not be published.