Kannada Oota ಉಪಹಾರ

MENASINA KAYI CHITHRANNA ಮೆಣಸಿನ ಕಾಯಿ ಚಿತ್ರಾನ್ನ

ಚಿತ್ರಾನ್ನ ಎಲ್ಲರೂ ಇಷ್ಟ ಪಡುವ ಆಹಾರ. ಸ್ವಲ್ಪ ವಿಭಿನ್ನ ರುಚಿಯ ಚಿತ್ರಾನ್ನದ ರೆಸಿಪಿ ಇಲ್ಲಿದೆ ನೋಡಿ.

ಮಾಡುವ ವಿಧಾನ:-

1 ಪಾವು ಅಕ್ಕಿ ತೊಳೆದು ಅನ್ನ ಮಾಡಿಡಿ.

6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿಯನ್ನು ಎಣ್ಣೆ ಹಾಕಿ ಹುರಿದಿಡಿ.

4 ಚಮಚ ಒಣ ಕೊಬ್ಬರಿ ತುರಿದಿಡಿ.

ನಿಂಬೆ ಗಾತ್ರದ ಹುಣಿಸೆ ಹಣ್ಣು ನಾರು, ಬೀಜ ಇಲ್ಲದ ಹಾಗೆ Clean ಮಾಡಿ, ಸ್ವಲ್ಪ ಬಿಸಿ ಮಾಡಿಡಿ.

1/4 ಚಮಚ ಮೆಂತ್ಯ, 1/2 ಚಮಚ ಜೀರಿಗೆ ಹುರಿದಿಡಿ.

   

ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ನೀರು ಸೇರಿಸದೆ, ಪುಡಿ ಮಾಡಿಡಿ.

ಬಾಣಲೆಯಲ್ಲಿ 5 ಅಥವಾ 6 ಚಮಚ ಎಣ್ಣೆ ಹಾಕಿ, ಒಂದು ಹಿಡಿ ಕಡಲೇ ಬೀಜ ಕರಿದು ತೆಗೆದಿಡಿ.

ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಇಂಗು, ಅರಿಶಿನ, ಮಾಡಿಟ್ಟ ಪುಡಿ, ಉಪ್ಪು ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ ನಾಲ್ಕೈದು ನಿಮಿಷ ಬೇಯಿಸಿ.

ಒಲೆಯಿಂದ ಇಳಿಸಿ ಮಾಡಿಟ್ಟ ಅನ್ನಕ್ಕೆ, ನಿಮಗೆ ಬೇಕಾಗುವಷ್ಟು ಗೊಜ್ಜು ಹಾಕಿ ಕಲೆಸಿ, ಕರಿದ ಕಡಲೇ ಬೀಜ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಮೆಣಸಿನ ಕಾಯಿ ಚಿತ್ರಾನ್ನ ಸಿದ್ಧ!

      

ಖಾರಾ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ ಕೊಳ್ಳಿ. ಬೇಕಾದರೆ ಸ್ವಲ್ಪ ಬೆಲ್ಲ ಸೇರಿಸಬಹುದು.

ಗೊಜ್ಜು ಮಾಡಿಟ್ಟರೆ ವಾರವಾದರೂ ಕೆಡುವುದಿಲ್ಲ! ಪ್ರವಾಸಗಳಿಗೆ ತೆಗೆದುಕೊಂಡು ಹೋಗಲು ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು.

Leave a Reply

Your email address will not be published.