ಸಿಹಿ ಗೆಣಸಿನಿಂದ ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ :-
1/2 ಕೇಜಿ ಗೆಣಸು ತೊಳೆದು ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿ ಪುಡಿ ಮಾಡಿಡಿ.
4 ಏಲಕ್ಕಿ ಪುಡಿ ಮಾಡಿಡಿ.
1 ಚಮಚ ಗಸಗಸೆ ಹುರಿದಿಡಿ.
1/4 ಕೇಜಿ ಬೆಲ್ಲ ಪುಡಿ ಮಾಡಿಡಿ.

ಬಾಣಲೆಯಲ್ಲಿ ಬೆಲ್ಲದ ಪುಡಿಗೆ ಸ್ವಲ್ಪ ಹಾಲು/ನೀರು ಹಾಕಿ ಬೆಲ್ಲ ಪೂರ್ತಿಯಾಗಿ ಕರಗಿದ ಮೇಲೆ ಗೆಣಸಿನ ಪುಡಿ ಹಾಕಿ ಚೆನ್ನಾಗಿ ಕಲೆಸಿ.
2 ಚಮಚ ತುಪ್ಪ ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ ಬೇಯಿಸಿ.

ಮಿಶ್ರಣವೆಲ್ಲಾ ಒಂದೇ ಉಂಡೆಯಂತೆ ಗಟ್ಟಿಯಾದಾಗ, ಏಲಕ್ಕಿ ಪುಡಿ ಹಾಕಿ ಕಲೆಸಿ, ತುಪ್ಪ ಸವರಿದ ತಟ್ಟೆಗೆ ಸುರಿದು ಹುರಿದ ಗಸಗಸೆ ಅದರ ಮೇಲೆ ಹರಡಿ ಸ್ವಲ್ಪ ಒತ್ತಿ.
ತಣ್ಣಗಾದ ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ!
ನೀವು ಬೇಕಾದರೆ ಬೆಲ್ಲದ ಬದಲು ಸಕ್ಕರೆ ಹಾಕಿ ಮಾಡಬಹುದು!
ಧನ್ಯವಾದಗಳು ![]()
![]()
![]()