ಉತ್ತರ ಭಾರತದ ಜನಪ್ರಿಯ ಆಹಾರ ಹಂಡಿ ಬಿರಿಯಾನಿ ಮಾಡುವ ವಿಧಾನ:-
ನಿಮಗೆ ಇಷ್ಟವಾದ ತರಕಾರಿ ತೊಳೆದು ಹೆಚ್ಚಿ ಸ್ವಲ್ಪ ಬೇಯಿಸಿಡಿ. ( Half boil )
1 ಚಿಕ್ಕ ಈರುಳ್ಳಿ, 1 ಟೋಮೇಟೋ, 1 ಕ್ಯಾಪ್ಸಿಕಮ್ ಸಣ್ಣಗೆ ಹೆಚ್ಚಿಡಿ.

1 ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣಗೆ, ಉದ್ದಕ್ಕೆ ಹೆಚ್ಚಿ ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದಿಡಿ.
12 ಗೋಡಂಬಿ ಕೆಂಪಗೆ ಹುರಿದಿಡಿ (ಬೇಕಾದರೆ)
2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕುಂಕುಮ ಕೇಸರಿ ನೆನೆಸಿಡಿ.

4 ಚಮಚ ಪುದೀನಾ, ಕೊತ್ತಂಬರಿ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ.
1 ಲೋಟ ಬಾಸುಮತಿ ಅರ್ಧ ಗಂಟೆ ನೆನೆಸಿಡಿ.
ನಂತರ ಕುಕ್ಕರಿನಲ್ಲಿ ನಾಲ್ಕು ಲೋಟ ನೀರು ಹಾಕಿ ಬಿಸಿಯಾಗಲು ಇಡಿ. ನಂತರ 1 ಪಲಾವ್ ಎಲೆ, 4 ಲವಂಗ, 1 ಇಂಚು ಚಕ್ಕೆ, 2 ಮರಾಠಿ ಮೊಗ್ಗು, 1 ಚಮಚ ಜೀರಿಗೆ, 1 ಚಮಚ ತುಪ್ಪ ನೆನೆಸಿದ ಅಕ್ಕಿ ಹಾಕಿ 80 % ಭಾಗ ಬೇಯಿಸಿ ನೀರು ಸೋರಿ ಹಾಕಿಡಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಮ್, ಟೋಮೇಟೋ ಹಾಕಿ ಹುರಿದು, ನಂತರ 1 ಚಮಚ Ginger garlic paste, 1/2 ಲೋಟ ತಾಜಾ ಮೊಸರು, 1 ಚಮಚ ಧನಿಯಾ ಪುಡಿ, 1 ಚಮಚ ಗರಂ ಮಸಾಲ, 2 ಚಮಚ ಖಾರಾ ಪುಡಿ, 1 ಚಮಚ ಬಿರಿಯಾನಿ ಪುಡಿ (ರೆಡಿ ಮೇಡ್ ಸಿಗುತ್ತೆ, Evetest, M T R company ದು, ವೆಜ್ ಅಂತ ಕೇಳಿ), ಬೇಯಿಸಿದ ತರಕಾರಿ, ಉಪ್ಪು ಹಾಕಿ ಕಲೆಸಿ ತರಕಾರಿ ಮಿಶ್ರಣ ತಯಾರು ಮಾಡಿಡಿ.

ಕುಕ್ಕರಿನಲ್ಲಿ ತರಕಾರಿ ಮಿಶ್ರಣ ಅರ್ಧ ಹಾಕಿ, ಅದರ ಮೇಲೆ ಅರ್ಧ ಬಾಸುಮತಿ ಅನ್ನ ಹಾಕಿ, ಮೇಲೆ ಅರ್ಧ ಹುರಿದ ಈರುಳ್ಳಿ, ಸ್ವಲ್ಪ ಪುದೀನಾ ಹಾಕಿ. ಅದರ ಮೇಲೆ ಉಳಿದ ತರಕಾರಿ ಮಿಶ್ರಣ, ಅದರ ಮೇಲೆ ಉಳಿದ ಅನ್ನ, ಉಳಿದ ಈರುಳ್ಳಿ, ಪುದೀನಾ, ಕೊತ್ತಂಬರಿ ಸೊಪ್ಪು, ಗೋಡಂಬಿ, ಕುಂಕುಮ ಕೇಸರಿ ನೆನೆಸಿದ ಹಾಲು, 1 ಚಮಚ ತುಪ್ಪ, ಸ್ವಲ್ಪ ಬಿರಿಯಾನಿ ಪುಡಿ ಉದುರಿಸಿ ಮುಚ್ಚಳ ಹಾಕಿ ವೇಟ್ ಹಾಕದೆ ಒಂದು ದಪ್ಪ ತಳದ ಕಾವಲಿಯ ಮೇಲೆ ಇಟ್ಟು ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷ ಬೇಯಿಸಿದರೆ ರುಚಿಯಾದ ಹಂಡಿ ಬಿರಿಯಾನಿ ಸಿದ್ಧ!
ಧನ್ಯವಾದಗಳು ![]()
![]()
![]()