ಸಿಹಿ ತಿನಿಸುಗಳು

PEANUT KATLI ಪೀನಟ್ ಕಟ್ಲಿ

PEANUT KATLI ಪೀನಟ್ ಕಟ್ಲಿ

ಬಡವರ ಬಾದಾಮಿ ಕಡಲೆ ಬೀಜದ ರುಚಿಯಾದ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ:-

ಒಂದು ಅಳತೆ ಕಡಲೆ ಬೀಜದ ಮೇಲಿನ ಸಿಪ್ಪೆ ಮಾತ್ರ ಹೋಗುವಷ್ಟು ಮಾತ್ರ ಹುರಿದು ಸಿಪ್ಪೆ ಬೇರೆ ಮಾಡಿಡಿ. (ಹೆಚ್ಚು ಹುರಿದರೆ ಕಟ್ಲಿಯ ಬಣ್ಣ ಬದಲಾಗುತ್ತದೆ. ನಾನು Microwave ನಲ್ಲಿ ಮೂರು ನಿಮಿಷ ಬಿಸಿ ಮಾಡಿದ್ದೇನೆ.) Mixie jar ನಲ್ಲಿ ಹಾಕಿ Pulse mode ನಲ್ಲಿ ಪುಡಿ ಮಾಡಿಡಿ . ಒಟ್ಟಿಗೆ ಪುಡಿ ಮಾಡದೆ ಮಧ್ಯೆ ಮಧ್ಯೆ ಗ್ಯಾಪ್ ಕೊಟ್ಟು ಪುಡಿ ಮಾಡಿ. ಏಲಕ್ಕಿ ಎರಡು ಪುಡಿ ಮಾಡಿಡಿ.

ದಪ್ಪ ತಳದ ಬಾಣಲೆಯಲ್ಲಿ ಮುಕ್ಕಾಲು ಅಳತೆ ಸಕ್ಕರೆಗೆ ಕಾಲು ಅಳತೆ ನೀರು ಹಾಕಿ ಕುದಿಯಲು ಇಡಿ . ಸಕ್ಕರೆ ಕರಗಿ ಅಂಟುಪಾಕ ಬಂದ ತಕ್ಷಣ ಕಡಲೆ ಬೀಜದ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಮಿಶ್ರಣ ಸ್ವಲ್ಪ ಗಟ್ಟಿಯಾಗಿ ಒಂದೇ ಉಂಡೆಯಾಗಿ ಬಾಣಲೆಯ ಅಂಚು ಬಿಡಲು ಶುರು ಆದಾಗ ತೆಗೆದು ತುಪ್ಪ ಸವರಿದ ತಟ್ಟೆ ಅಥವಾ Silver foil ಮೇಲೆ ಹರಡಿ ತುಪ್ಪ ಸವರಿದ ಲಟ್ಟಣಿಗೆಯಿಂದ ಲಟ್ಟಿಸಿ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.

ಅಂಟುಪಾಕ ಬಂದರೆ ಸಾಕು. ಒಂದೆಳೆ ಪಾಕ ಅವಶ್ಯಕತೆ ಇಲ್ಲ. ಅಂಟುಪಾಕ ಅಂದರೆ ಸಕ್ಕರೆ ಪೂರ್ತಿ ಕರಗಿದ ಮೇಲೆ ಎರಡು ಬೆರಳುಗಳ ಮಧ್ಯೆ ಪಾಕ ಮುಟ್ಟಿದರೆ ಅಂಟು ಅಂಟು ಅನ್ನಿಸುತ್ತದೆ.

ಧನ್ಯವಾದಗಳು 🙏🙏🙏

Leave a Reply

Your email address will not be published.