Curry

PANEER BUTTER TIKKA MASALA ಪನ್ನೀರ್ ಬಟರ್ ಮಸಾಲಾ

PANEER BUTTER TIKKA MASALA ಪನ್ನೀರ್ ಬಟರ್ ಮಸಾಲಾ

ಪನ್ನೀರ್ ಮತ್ತು ಬೆಣ್ಣೆಯ ಕಾಂಬಿನೇಷಶ್ ಅಂದ ಮೇಲೆ ಕೇಳಬೇಕೆ? ಬಾಯಲ್ಲಿ ನೀರೂರಿಸುವ ಹಾಗಿರುತ್ತದೆ.

ಮಾಡುವ ವಿಧಾನ:-

200 ಗ್ರಾಂ ಪನ್ನೀರ್, ಒಂದು ದೊಡ್ಡ ಈರುಳ್ಳಿ, 1 ಹಸಿರು ಕ್ಯಾಪ್ಸಿಕಂ, 1 ಕೆಂಪು ಕ್ಯಾಪ್ಸಿಕಂ ಚೌಕಾಕಾರವಾಗಿ ಕತ್ತರಿಸಿಡಿ.

200 ಮಿ. ಲೀಟರ್ ಗಟ್ಟಿಯಾದ ತಾಜಾ ಮೊಸರಿಗೆ 1ಚಮಚ ಖಾರದ ಪುಡಿ, 1/2 ಚಮಚ ಅರಷಿಣ ಪುಡಿ, 1/2 ಚಮಚ ಧನಿಯ ಪುಡಿ, 1/2 ಚಮಚ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್ ಹಾಕಿ ಚೆನ್ನಾಗಿ ಕಲೆಸಿ, ಈರುಳ್ಳಿ ಪನ್ನೀರ್ ಕ್ಯಾಪ್ಸಿಕಂ ತುಂಡುಗಳನ್ನು ಮೊಸರಿನಲ್ಲಿ ಚೆನ್ನಾಗಿ ಕಲೆಸಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಟೂತ್ ಪಿಕ್ ನಲ್ಲಿ ಚುಚ್ಚಿ ದಪ್ಪ ತಳದ ಕಾವಲಿಯಲ್ಲಿ ಸ್ವಲ್ಪ ಬೆಣ್ಣೆ/ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಎಲ್ಲಾ ಕಡೆ ತಿರುಗಿಸುತ್ತಾ ಬೇಯಿಸಿಡಿ. ಟೂತ್ ಪಿಕ್ ಸಿಗದಿದ್ದರೆ ತವಾ ಮೇಲೆ ಹಾಗೆ ಹರಡಿ ಬೇಕಾದರೂ ಬೇಯಿಸಬಹದು. ಅಕಸ್ಮಾತ್ ಮೊಸರು ಉಳಿದರೆ ಅದನ್ನು ಗ್ರೇವಿ ಮಾಡುವಾಗ ಹಾಕಬಹುದು.

ಗ್ರೇವಿ ಮಾಡಲು :–

ಎರಡು ದೊಡ್ಡ ಟೋಮೆಟೋ ಬಿಸಿ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದು ನೆನೆಸಿದ ಹತ್ತು ಗೋಡಂಬಿ ಜೊತೆಗೆ ನುಣ್ಣಗೆ ರುಬ್ಬಿಡಿ.

ಬಾಣಲೆಯಲ್ಲಿ ಎರಡು ದೊಡ್ಡ ಚಮಚ ಬೆಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಅರ್ಧ ಈರುಳ್ಳಿ, ಅರ್ಧ ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಅರಿಷಿಣ, ಸ್ವಲ್ಪ ಉಪ್ಪು, ಅರ್ಧ ಚಮಚ ಖಾರದ ಪುಡಿ , ರುಬ್ಬಿದ ಮಿಶ್ರಣ, ಸ್ವಲ್ಪ ನೀರು ಸೇರಿಸಿ ಹಾಕಿ ಹಸಿ ವಾಸನೆ ಹೋಗುವವರೆಗೆ ಕಡಿಮೆ ಉರಿಯಲ್ಲಿ ಎಣ್ಣೆ ಮೇಲೆ ತೇಲುವವರೆಗೆ ಕಡಿಮೆ ಉರಿಯಲ್ಲಿ ಕುದಿಸಿ. ನಂತರ ತವಾ ಮೇಲೆ ಬೇಯಿಸಿದ ಪನ್ನೀರ್, ಕ್ಯಾಪ್ಸಿಕಂ, ಈರುಳ್ಳಿ ಹಾಕಿ ಕಲೆಸಿ ಕೊನೆಯಲ್ಲಿ ಹೆಚ್ಚಿದಕೊತ್ತಂಬರಿ ಸೊಪ್ಪು ಉದುರಿಸಿದರೆ, ಬಾಯಲ್ಲಿ ನೀರೂರಿಸುವ, ರುಚಿಯಾದ ಪನ್ನೀರ್ ಬಟರ್ ಟಿಕಾ ಮಸಾಲಾ ಸವಿಯಲು ಸಿದ್ಧ!

ತವಾ ಮೇಲೆ ಬೇಯಿಸಿದ ಪನ್ನೀರ್, ಕ್ಯಾಪ್ಸಿಕಂ, ಈರುಳ್ಳಿ ಹಾಗೆ ಬೇಕಾದರೂ ತಿನ್ನಬಹುದು. ತುಂಬಾ ರುಚಿಯಾಗಿರುತ್ತದೆ.

ಧನ್ಯವಾದಗಳು 🙏🙏🙏

Leave a Reply

Your email address will not be published.