ಸಿಹಿ ತಿನಿಸುಗಳು

MAVINA HALUBAYI ಮಾವಿನ ಹಾಲು ಬಾಯಿ

ಮಾವಿನ ಹಣ್ಣಿನ ಪ್ರಿಯರೆ ನಿಮಗಾಗಿ ಇಲ್ಲಿದೆ ಒಂದು ಹೊಸ ರೆಸಿಪಿ!

ಮಾಡುವ ವಿಧಾನ:-

1 ಅಳತೆ ಅಕ್ಕಿಯನ್ನು 2 ಗಂಟೆ ನೆನೆಸಿಡಿ.

1 ಅಳತೆ ತೆಂಗಿನ ಕಾಯಿ ತುರಿದಿಡಿ.

1 ಅಳತೆ ಬೆಲ್ಲ ಪುಡಿ ಮಾಡಿಡಿ.

1 ಅಳತೆ ಮಾವಿನ ಹಣ್ಣಿನ ರಸ ತೆಗೆದಿಡಿ.

4 ಏಲಕ್ಕಿ ಪುಡಿ ಮಾಡಿಡಿ.

ಮೊದಲು ಕಾಯಿ ತುರಿ ಅಕ್ಕಿ ನುಣ್ಣಗೆ ರುಬ್ಬಿಡಿ. ನಂತರ ಮಾವಿನ ಹಣ್ಣಿನ ರಸ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿಡಿ.

ಬಾಣಲೆಯಲ್ಲಿ ಬೆಲ್ಲದ ಪುಡಿಗೆ ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಿ. ಬೆಲ್ಲ ಸಂಪೂರ್ಣವಾಗಿ ಕರಗಿದಾಗ ಅಕ್ಕಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲೆಸಿ.

ಕೈ ಬಿಡದೆ ಕಡಿಮೆ ಉರಿಯಲ್ಲಿ ಕಲೆಸುತ್ತಾ ಇರಿ. 1 ಚಮಚ ತುಪ್ಪ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲೆಸಿ.

ಒದ್ದೆ ಕೈಯಿಂದ ಮುಟ್ಟಿದರೆ ಕೈಗೆ ಮಿಶ್ರಣ ಅಂಟದಿದ್ದರೆ ಹಾಲು ಬಾಯಿ ಸಿದ್ಧವಾಗಿದೆ ಎಂದು ಅರ್ಥ!

ಈಗ ಒಲೆಯಿಂದ ಇಳಿಸಿ ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಟ್ಟಿ, ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ!

ಧನ್ಯವಾದಗಳು

Leave a Reply

Your email address will not be published.