ಸಿಹಿ ತಿನಿಸುಗಳು

CARROT KHEER ಕ್ಯಾರೆಟ್ ಖೀರ್

CARROT KHEER ಕ್ಯಾರೆಟ್ ಖೀರ್

ಕ್ಯಾರೆಟ್ಟಿನ ಸಿಹಿಯಾದ, ರುಚಿಯಾದ, ಆರೋಗ್ಯಕರವಾದ ಪಾಯಸ ಮಾಡುವ ವಿಧಾನ ಇಲ್ಲಿದೆ:-

ಮಾಡುವ ವಿಧಾನ:-

ನಾಲ್ಕು ಕ್ಯಾರೆಟ್ ಸಿಪ್ಪೆ ತೆಗೆದು ಹೆಚ್ಚಿ ಮೃದುವಾಗುವವರೆಗೆ ಬೇಯಿಸಿಡಿ.

ಎರಡು ಚಮಚ ಕಾಯಿ ತುರಿದಿಡಿ.

ಅರ್ಧ ಲೀಟರ್ ಕುದಿಸಿಡಿ.

ಸ್ವಲ್ಪ ಗೋಡಂಬಿ, ಬಾದಾಮಿ, ದ್ರಾಕ್ಷಿ ತುಪ್ಪದಲ್ಲಿ ಹುರಿಡಿಡಿ.

ಎರಡು ಏಲಕ್ಕಿ ಪುಡಿ ಮಾಡಿಡಿ.

ಬೇಯಿಸಿದ ಕ್ಯಾರೆಟ್ ಗೆ ಕಾಯಿ ತುರಿ ಸೇರಿಸಿ ರುಬ್ಬಿ, ಕಾಯಿಸಿದ ಹಾಲು ಸೇರಿಸಿ, ದಪ್ಪ ತಳದ ಪಾತ್ರೆಯಲ್ಲಿ ಕುದಿಸಿ. ನಂತರ ನಾಲ್ಕು ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಕಲೆಸಿ. ಕೊನೆಯಲ್ಲಿ ಹುರಿದ ಗೋಡಂಬಿ ಬಾದಾಮಿ, ಏಲಕ್ಕಿ ಪುಡಿ ಸೇರಿಸಿದರೆ ಸುಲಭವಾಗಿ ಮಾಡಬಹುದು ಬಾಯಲ್ಲಿ ನೀರೂರಿಸುವ ಕ್ಯಾರೆಟ್ ಖೀರ್ ಸವಿಯಲು ಸಿದ್ಧ!

ಈ ಖೀರನ್ನು ಬಿಸಿಯಾಗಿ ಅಥವಾ ತಣ್ಣಗಾದ ಮೇಲೆ ಬೇಕಾದರೆ ಸವಿಯಬಹುದು.

ಧನ್ಯವಾದಗಳು 🙏🙏🙏

Leave a Reply

Your email address will not be published.