ಸಿಹಿ ತಿನಿಸುಗಳು

CARROT LADDU ಕ್ಯಾರೆಟ್ ಲಡ್ಡು

CARROT LADDU ಕ್ಯಾರೆಟ್ ಲಡ್ಡು

ಕ್ಯಾರೆಟ್ ಆರೋಗ್ಯಕರ, ರುಚಿ ಕರ ತರಕಾರಿ. ಇದರಿಂದ ಸುಲಭವಾಗಿ ಮಾಡಬಹುದಾದ, ರುಚಿಯಾದ ಲಡ್ಡುವಿನ ರೆಸಿಪಿ ಇಲ್ಲಿದೆ.

ಮಾಡುವ ವಿಧಾನ:-

ನಾಲ್ಕು ಕ್ಯಾರೆಟ್ ತುರಿದಿಡಿ. ಅರ್ಧ ಕಪ್ ಕಾಯಿ ತುರಿದಿಡಿ. ಕಾಲು ಕಪ್ ಗೋಡಂಬಿ ಬಾದಾಮಿ ಸಣ್ಣಗೆ ಹೆಚ್ಚಿಡಿ. ಅರ್ಧ ಕಪ್ ಸಕ್ಕರೆಗೆ ಎರಡು ಏಲಕ್ಕಿ ಹಾಕಿ ಪುಡಿ ಮಾಡಿಡಿ.

ದಪ್ಪ ತಳದ ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ, ಕ್ಯಾರೆಟ್ ತುರಿ ಮತ್ತು ಕಾಯಿ ತುರಿ ಹಾಕಿ ಅದರಲ್ಲಿರುವ ನೀರಿನಂಶ ಹೋಗುವವರೆಗೆ ಕಡಿಮೆ ಉರಿಯಲ್ಲಿ ಬಾಡಿಸಿ, ನಂತರ ಸಕ್ಕರೆ ಪುಡಿ, ಗೋಡಂಬಿ ಚೂರುಗಳು, ಅರ್ಧ ಕಪ್ ಹಾಲಿನ ಪುಡಿ ಹಾಕಿ ಚೆನ್ನಾಗಿ ಕಲೆಸಿ.

ಮಿಶ್ರಣ ಗಟ್ಟಿ ಆದ ಮೇಲೆ ಒಲೆಯಿಂದ ಇಳಿಸಿ ಸ್ವಲ್ಪ ಬೆಚ್ಚಗಾದ ಮೇಲೆ ನಿಮಗೆ ಬೇಕಾದ ಅಳತೆಯ ಉಂಡೆ ಮಾಡಿದರೆ, ಬಾಯಲ್ಲಿ ನೀರೂರಿಸುವ, ಸುಲಭವಾಗಿ ಮಾಡಬಹುದಾದ ಕ್ಯಾರೆಟ್ ಲಡ್ಡು ಸವಿಯಲು ಸಿದ್ಧ!

ಹಾಲಿನ ಪುಡಿ Optional. ಅದನ್ನು ಹಾಕದೆ ಬೇಕಾದರೂ ಮಾಡಬಹುದು. ಸಕ್ಕರೆ ನಿಮ್ಮ ರುಚಿಗೆ ತಕ್ಕಷ್ಟು ಹಾಕಿಕೊಳ್ಳಬಹುದು.

ಧನ್ಯವಾದಗಳು 🙏🙏🙏

Leave a Reply

Your email address will not be published.