BOOST & COCONUT LADDU ಬೂಸ್ಟ್ & ಕೋಕೊನಟ್ ಲಡ್ಡು
ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಮಕ್ಕಳಿಗಾಗಿ ಕುಡಿಸಲು ಬೂಸ್ಟ್ ತರುತ್ತಾರೆ. ಕೆಲವೊಮ್ಮೆ ಆ ಬೂಸ್ಟ್ ಹಾಗೇ ಉಳಿದುಬಿಡುತ್ತದೆ. ಅದನ್ನು ಉಪಯೋಗಿಸಿ ಒಂದು ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ :-
1 ಅಳತೆ ಬೆಲ್ಲ ಪುಡಿ ಮಾಡಿಡಿ.
2 ಅಳತೆ ಕಾಯಿ ತುರಿದಿಡಿ.
ಚಿಟಿಕೆ ಏಲಕ್ಕಿ ಪುಡಿ ಮಾಡಿಡಿ.
ಸ್ವಲ್ಪ ಡ್ರೈ ಫ್ರೂಟ್ಸ್ ತರಿ ತರಿಯಾಗಿ ಪುಡಿ ಮಾಡಿಡಿ. (ಬೇಕಾದರೆ)

ದಪ್ಪ ತಳದ ಬಾಣಲೆಯಲ್ಲಿ ಬೆಲ್ಲ ಮುಳುಗುವಷ್ಟು ನೀರು ಹಾಕಿ ಕುದಿಯಲು ಇಡಿ. ಬೆಲ್ಲ ಸಂಪೂರ್ಣವಾಗಿ ಕರಗಿದ ಮೇಲೆ ಒಂದು ಅಳತೆ ಬೂಸ್ಟ್, ಕಾಯಿ ತುರಿ, ಏಲಕ್ಕಿ ಪುಡಿ ಹಾಕಿ ಗಂಟಿಲ್ಲದ ಹಾಗೆ ಚೆನ್ನಾಗಿ ಕಲೆಸಿ. ಬೆಲ್ಲ ಪಾಕ ಬರುವುದು ಬೇಡ. ಮೀಡಿಯಂ ಫ್ಲೇಮ್ ನಲ್ಲಿ ಮಿಶ್ರಣ ಎಲ್ಲಾ ಒಂದೇ ಉಂಡೆ ಆಗುವವರೆಗೆ ಬೇಯಿಸಿ, ನಂತರ ಒಂದು ಚಮಚ ತುಪ್ಪ ಹಾಕಿ ಮತ್ತೊಂದು ಸಲ ಚೆನ್ನಾಗಿ ಕಲೆಸಿ ಒಲೆಯಿಂದ ಕೆಳಗಿಳಿಸಿ.
ತಟ್ಟೆಯಲ್ಲಿ ಡ್ರೈ ಫ್ರೂಟ್ಸ್ ಪುಡಿ ಹಾಕಿ, ಮಿಶ್ರಣ ಸ್ವಲ್ಪ ಬೆಚ್ಚಗೆ ಆದ ಮೇಲೆ ಪುಟ್ಟ ಪುಟ್ಟ ಉಂಡೆ ಮಾಡಿ, ಡ್ರೈ ಫ್ರೂಟ್ಸ್ ಪುಡಿ ಮೇಲೆ ಹೊರಳಿಸಿ ಸವಿಯಿರಿ.
ತೆಂಗಿನ ಕಾಯಿ ಹಾಕಿರುವುದರಿಂದ ಎರಡು ದಿನ ಫ್ರಿಡ್ಜ್ ನಲ್ಲಿಟ್ಟು ಸವಿಯಬಹುದು.

ಧನ್ಯವಾದಗಳು 🙏🙏🙏
