Ice Cream

MANGO ICECREAM (Sugar Free) ಮ್ಯಾಂಗೋ ಐಸ್ ಕ್ರೀಮ್ (ಸಕ್ಕರೆ ರಹಿತ)

MANGO ICECREAM (Sugar Free) ಮ್ಯಾಂಗೋ ಐಸ್ ಕ್ರೀಮ್ (ಸಕ್ಕರೆ ರಹಿತ)

ಐಸ್ ಕ್ರೀಮ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಬೇಸಿಗೆ ಕಾಲದಲ್ಲಿ ಎಷ್ಟು ತಿಂದರೂ ಸಾಲದು. ಆದರೆ ಸಾಧಾರಣವಾಗಿ ಐಸ್ ಕ್ರೀಮ್ ನಲ್ಲಿ ಸಾಕಷ್ಟು ಸಕ್ಕರೆ ಹಾಕುವುದರಿಂದ ಮಧುಮೇಹಿಗಳು ಐಸ್ ಕ್ರೀಮ್ ತಿನ್ನಲು ಆಗುವುದಿಲ್ಲ. ಸಕ್ಕರೆ ಬದಲಾಗಿ Sugar free ಹಾಕಿ ಸುಲಭವಾಗಿ ಮಾಡಬಹುದು. ಮಧುಮೇಹಿಗಳೂ ಸಹ ಸ್ವಲ್ಪ ಮಟ್ಟಿಗೆ ಐಸ್ ಕ್ರೀಮ್ ತಿನ್ನಬಹುದು!

ಮಾಡುವ ವಿಧಾನ :-

1 ಕೇಜಿ ಮಾವಿನ ಹಣ್ಣು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ನೀರು ಸೇರಿಸದೆ ನುಣ್ಣಗೆ ರುಬ್ಬಿಡಿ.

ಸ್ವಲ್ಪ ಗೋಡಂಬಿ ಬಾದಾಮಿ ಸಣ್ಣಗೆ ಹೆಚ್ಚಿಡಿ. (ಬೇಕಾದರೆ)

ಬಟ್ಟಲಿನಲ್ಲಿ 250 ಮಿಲೀ ಫ್ರೆಶ್ ಕ್ರೀಮ್ ಬ್ಲೆಂಡರ್ ನಲ್ಲಿ ನಾಲ್ಕೈದು ನಿಮಿಷ ಬೀಟ್ ಮಾಡಿ. ಇದಕ್ಕೆ ರುಬ್ಬಿದ ಮಾವಿನ ಮಿಶ್ರಣ, ಒಂದು ಟೇಬಲ್ ಚಮಚ ಷುಗರ್ ಫ್ರೀ ಪುಡಿ ಸೇರಿಸಿ ಮತ್ತೊಂದು ಸಲ ಬ್ಲೆಂಡರ್ ನಲ್ಲಿ ಮೂರ್ನಾಲ್ಕು ನಿಮಿಷ ಬೀಟ್ ಮಾಡಿ, ಫ್ರೀಝರ್ ನಲ್ಲಿಟ್ಟು ಗಟ್ಟಿಯಾದ ನಂತರ ಮೇಲೆ ಹೆಚ್ಚಿದ ಗೋಡಂಬಿ ಬಾದಾಮಿ ಹಾಕಿ ಸವಿಯಿರಿ.

ನಾನು ಹಾಕಿದ್ದ ಮಾವಿನ ಹಣ್ಣು ತುಂಬಾ ಸಿಹಿಯಾಗಿತ್ತು. ಹಾಗಾಗಿ ನಾನು ಒಂದು ಟೇಬಲ್ ಚಮಚ ಷುಗರ್ ಫ್ರೀ ಪುಡಿ ಹಾಕಿದ್ದೇನೆ. ನೀವು ನಿಮ್ಮ ರುಚಿಗೆ ತಕ್ಕಷ್ಟು ಹಾಕಿ ಕೊಳ್ಳಬಹುದು.

ಧನ್ಯವಾದಗಳು 🙏🙏🙏

Leave a Reply

Your email address will not be published.