Ice Cream

MANGO KULFI ಮ್ಯಾಂಗೋ ಕುಲ್ಫಿ

MANGO KULFI ಮ್ಯಾಂಗೋ ಕುಲ್ಫಿ

ಹಣ್ಣುಗಳ ರಾಜ ಮಾವಿನ ಹಣ್ಣಿನ ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ:-

ಮಾವಿನ ಹಣ್ಣಿನ ಸಿಪ್ಪೆ ತೆಗೆದು, ಎಚ್ಚರಿಕೆಯಿಂದ ಅದರ ಓಟೆಯನ್ನು ( ಬೀಜ ) ತೆಗೆದಿಡಿ.

ಸ್ವಲ್ಪ ಬಾದಾಮಿ ಗೋಡಂಬಿ ಪುಡಿ ಮಾಡಿ, ಎರಡು ಚಮಚ ಫ್ರೆಶ್ ಕ್ರೀಮ್, ನಾಲ್ಕು ಚಮಚ Condensed milk, ಚಿಟಿಕೆ ಏಲಕ್ಕಿ ಪುಡಿ ಜೊತೆಗೆ ಚೆನ್ನಾಗಿ ಕಲೆಸಿ, ಮಾವಿನ ಹಣ್ಣಿನೊಳಗೆ ತುಂಬಿ, ಫ್ರೀಝರ್ ನಲ್ಲಿ ಎಂಟು ಗಂಟೆ ಇಟ್ಟು, ನಿಮಗೆ ಬೇಕಾದ ಅಳತೆಗೆ ಕತ್ತರಿಸಿದರೆ ಬಾಯಲ್ಲಿ ನೀರೂರಿಸುವ, ಸುಲಭವಾಗಿ ಮಾಡಬಹುದಾದ ಮ್ಯಾಂಗೋ ಕುಲ್ಫಿ ಸವಿಯಲು ಸಿದ್ಧ!

Condensed milk ಸಿಗದಿದ್ದರೆ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಪುಡಿ ಸೇರಿಸಿ ಮಾಡಬಹುದು.

ಧನ್ಯವಾದಗಳು 🙏🙏🙏

Leave a Reply

Your email address will not be published.