RAJ BHOG ರಾಜ್ ಭೋಗ್
ಸಿಹಿ ತಿನ್ನುವ ಆಸೆ ಆದ ತಕ್ಷಣ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ.
ಮಾಡುವ ವಿಧಾನ:-
ಒಂದು ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಕುದಿಯಲು ಆರಂಭವಾದಾಗ 1/2 ಬಟ್ಟಲು ಗಟ್ಟಿಯಾದ ಮೊಸರು ಹಾಕಿ, ಉರಿ ಕಡಿಮೆ ಮಾಡಿ ಸಣ್ಣ ಉರಿಯಲ್ಲಿ ಹಾಲು ಪೂರ್ತಿಯಾಗಿ ಒಡೆಯುವ ತನಕ ಕಲೆಸುತ್ತಿರಿ.

ಹಾಲು ಸಂಪೂರ್ಣವಾಗಿ ಮೊಸರಿನ ಹಾಗೆ ಆದಾಗ ಒಂದು ಬಟ್ಟೆಯಿಂದ ಶೋಧಿಸಿ! ಗಟ್ಟಿಯಾದ ಪನ್ನೀರ್ ಭಾಗವನ್ನು ಗಂಟು ಕಟ್ಟಿ ಅರ್ಧ ಗಂಟೆ ನೇತು ಹಾಕಿ! ಹಾಲಿನ ನೀರಾದ ಭಾಗವನ್ನು ಚೆಲ್ಲದೆ ರಸಂ, ಸೂಪ್ ಗೆ ಬಳಸಿ! ಇದು ಆರೋಗ್ಯಕ್ಕೆ ಒಳ್ಳೆಯದು!
ಗಟ್ಟಿಯಾದ ಪನ್ನೀರ್ ಅನ್ನು ಚೆನ್ನಾಗಿ ನಾದಿ. ನೀವು ಹೆಚ್ಚು ನಾದಿದಷ್ಟೂ ರಾಜ್ ಭೋಗ್ ಮೃದುವಾಗಿ ಬರುತ್ತದೆ!
ಇದರಲ್ಲಿ ಸ್ವಲ್ಪ ಪನ್ನೀರ್, ಡ್ರೈ ಫ್ರೂಟ್ಸ್ ಕತ್ತರಿಸಿದ್ದು ಸ್ವಲ್ಪ, 2 ಚಮಚ ಸಕ್ಕರೆ ಪುಡಿ ಹಾಕಿ ಒಳಗೆ ತುಂಬಲು ಹೂರಣ ರೆಡಿ ಮಾಡಿಡಿ.


ಉಳಿದ ಗಟ್ಟಿಯಾದ ಪನ್ನೀರಿಗೆ ಒಂದು ಚಿಕ್ಕ ಚಮಚ ಕಾರ್ನ್ ಫ್ಲೋರ್ ಅಥವಾ ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಮಿಶ್ರಣ ತೆಗೆದು ಕೊಂಡು ಮಧ್ಯೆ ಡ್ರೈ ಫ್ರೂಟ್ಸ್ ಮಿಶ್ರಣ ಇಟ್ಟು ಮಡಚಿ ಗುಂಡಗೆ ಮಾಡಿ.


1/4 ಕೇಜಿಯಷ್ಟು ಸಕ್ಕರೆ 1/2 ಲೀಟರ್ ನೀರು ಹಾಕಿ ಕುದಿಯಲು ಇಡಿ. ಸಕ್ಕರೆ ಸಂಪೂರ್ಣವಾಗಿ ಕರಗಿದ ನಂತರ ಐದು ನಿಮಿಷ ಕುದಿಯಲು ಬಿಡಿ.
ನಂತರ ಒಂದೊಂದಾಗಿ ಪನ್ನೀರ್ ಉಂಡೆಗಳನ್ನು ಬಿಸಿ ಸಕ್ಕರೆ ಪಾಕದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷ ಕುದಿಸಿ.

ಕೊನೆಯಲ್ಲಿ ಏಲಕ್ಕಿ ಪುಡಿ ಉದುರಿಸಿ ತಣ್ಣಗಾಗಲು ಬಿಡಿ.
ನಂತರ ಫ್ರಿಡ್ಜ್ ನಲ್ಲಿಟ್ಟು ಸವಿಯಿರಿ!
ಇದು ಹಾಲಿನ ಪದಾರ್ಥವಾಗಿರುವುದರಿಂದ ಮಾಡಿದ ಎರಡು ಮೂರು ದಿನಗಳಲ್ಲಿ ತಿನ್ನಬೇಕು!


