ಸಾಂಬಾರು ಮತ್ತು ಪಲ್ಯಗಳು

RAW MANGO RASAM ರಾ ಮ್ಯಾಂಗೋ ರಸಂ

RAW MANGO RASAM ರಾ ಮ್ಯಾಂಗೋ ರಸಂ

ಮಾವಿನ ಕಾಯಿಯ ಯಾವುದೇ ಅಡುಗೆ ರುಚಿಕರ! ತೋತಾಪುರಿ ಮಾವಿನ ಕಾಯಿ ಹಾಕಿ ರುಚಿಯಾದ ರಸಂ/ಸಾರು ಮಾಡುವ ವಿಧಾನ ಇಲ್ಲಿದೆ!

ಮಾಡುವ ವಿಧಾನ :-

ನಿಮಗೆ ಬೇಕಾಗುವಷ್ಟು ಬೇಳೆ ತೊಳೆದು ಚಿಟಿಕೆ ಅರಿಷಿಣ, ಒಂದು ಚಮಚ ಎಣ್ಣೆ ಹಾಕಿ ನುಣ್ಣಗೆ ಬೇಯಿಸಿಡಿ.

ಅರ್ಧ ತೋತಾಪುರಿ ಮಾವಿನ ಕಾಯಿ ಸಿಪ್ಪೆ ತೆಗೆದು/ ಸಿಪ್ಪೆ ಸಮೇತ ನುಣ್ಣಗೆ ರುಬ್ಬಿ ಸೋಸಿಡಿ.

ಅರ್ಧ ಚಮಚ ಕರಿ ಮೆಣಸು, ಅರ್ಧ ಚಮಚ ಜೀರಿಗೆ ಹುರಿದು ತರಿ ತರಿಯಾಗಿ ಪುಡಿ ಮಾಡಿಡಿ.

ಬೆಂದ ಬೇಳೆಗೆ ರಸಂ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಚೂರು ಬೆಲ್ಲ, ಮೆಣಸು ಜೀರಿಗೆ ಪುಡಿ, ಮಾವಿನ ಕಾಯಿ ರಸ ಹಾಕಿ ಕುದಿಸಿ, ಕೊನೆಯಲ್ಲಿ ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ, ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿದರೆ ಬಾಯಲ್ಲಿ ನೀರೂರಿಸುವ ಮಾವಿನ ಕಾಯಿ ರಸಂ ಸವಿಯಲು ಸಿದ್ಧ!

ಧನ್ಯವಾದಗಳು 🙏🙏🙏

Leave a Reply

Your email address will not be published.