ಆಲೂಗೆಡ್ಡೆ ಎಲ್ಲರಿಗೂ ಇಷ್ಟವಾಗುವ ತರಕಾರಿ! ಇದರಲ್ಲಿ ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ:-
4 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ.
1/2 ಹೋಳು ತೆಂಗಿನ ಕಾಯಿ ತುರಿದು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಮೊದಲು ಗಟ್ಟಿಯಾದ ಹಾಲು ತೆಗೆದಿಡಿ. ಮತ್ತೊಂದು ಬಾರಿ ನೀರು ಹಾಕಿ ನುಣ್ಣಗೆ ರುಬ್ಬಿ ಇನ್ನೊಂದು ಬಾರಿ ಹಾಲು ಸೋರಿ ಹಾಕಿಡಿ.
1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ. 2 ಟೋಮೋಟೋ ಸಣ್ಣಗೆ ಹೆಚ್ಚಿಡಿ.
4 ಹಸಿ ಮೆಣಸಿನಕಾಯಿ, 1/2 ಇಂಚು ಶುಂಠಿ ಸಿಪ್ಪೆ ತೆಗೆದು ಪೇಸ್ಟ್ ಮಾಡಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, ಟೋಮೇಟೋ, ಚಿಟಿಕೆ ಅರಿಷಿಣ, ಹಸಿ ಮೆಣಸಿನಕಾಯಿ ಶುಂಠಿ ಪೇಸ್ಟ್ ಹಾಕಿ ಸ್ವಲ್ಪ ಬಾಡಿಸಿ ನಂತರ ಆಲೂಗೆಡ್ಡೆಯ ತುಂಡುಗಳು, ಎರಡನೇ ಬಾರಿ ತೆಗೆದ ಕಾಯಿ ಹಾಲು, ಉಪ್ಪು ಹಾಕಿ ಸ್ವಲ್ಪ ಹೊತ್ತು ಕುದಿಸಿ.
ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಮೊದಲು ತೆಗೆದ ಗಟ್ಟಿಯಾದ ಕಾಯಿ ಹಾಲು ಹಾಕಿದರೆ, ರುಚಿಯಾದ ಆಲೂ ಕರ್ರಿ ಸವಿಯಲು ಸಿದ್ಧ!
ಈ ಕರ್ರಿಯಲ್ಲಿ ಹೆಚ್ಚಿನ ಮಸಾಲೆ ಇಲ್ಲ! ಚಪಾತಿ, ಪೂರಿ, ರವಾ ಇಡ್ಲಿ, ದೋಸೆಯೊಂದಿಗೆ ಸೂಪರ್ ಕಾಂಬಿನೇಶನ್!
ಧನ್ಯವಾದಗಳು! ![]()
![]()
![]()