ಸಾಂಬಾರು ಮತ್ತು ಪಲ್ಯಗಳು

IYENGARS PEPPER RASAM ಅಯ್ಯಂಗಾರ್ಸ್ ಪೆಪ್ಪರ್ ರಸಂ

ಮೆಣಸು ಆರೋಗ್ಯಕ್ಕೆ ಬಹಳ ಒಳ್ಳೆಯದು! ಕೆಮ್ಮು, ನೆಗಡಿಗೆ ರಾಮಬಾಣ ಇದ್ದ ಹಾಗೆ! ಮಳೆಗಾಲದಲ್ಲಿ ಚಳಿಗೆ, ನೆಗಡಿಗೆ ಈ ಬಿಸಿ ಬಿಸಿ ಸಾರು ಕುಡಿದು ನೋಡಿ! ಇದು ರುಚಿಕರ ಹಾಗೂ ಆರೋಗ್ಯಕರ!

ಮಾಡುವ ವಿಧಾನ:-

1 ಚಿಕ್ಕ ಲೋಟ ಬೇಳೆಯನ್ನು ತೊಳೆದು ಒಂದು ಚಮಚ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ. ಬೇಕಾದರೆ ಸ್ವಲ್ಪ ನೀರು ಹಾಕಿ ಸೋರಿ ಹಾಕಿ ಬೇಳೆಯ ಕಟ್ಟು ತೆಗೆದಿಡಿ. ಬೆಂದ ಬೇಳೆಯನ್ನು ಪಲ್ಯ, ದಾಲ್ ಮಾಡಲು ಉಪಯೋಗಿಸಬಹುದು.

ಅರ್ಧ ದೊಡ್ಡ ಹೋಳು ತೆಂಗಿನ ಕಾಯಿ ತುರಿದು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಕಾಯಿ ಹಾಲು ತೆಗೆದಿಡಿ. ರುಬ್ಬಿದ ಮಿಶ್ರಣಕ್ಕೆ ಇನ್ನೊಂದು ಬಾರಿ ನೀರು ಹಾಕಿ ನುಣ್ಣಗೆ ರುಬ್ಬಿ ಹಾಲು ತೆಗೆದಿಡಿ.

ಉದ್ದಿನ ಬೇಳೆ – 2 ಟೀ ಚಮಚ
ಕರಿ ಮೆಣಸು – 2 ಟೀ ಚಮಚ
ಅಕ್ಕಿ – 1 ಟೀ ಚಮಚ
ಬ್ಯಾಡಗಿ ಮೆಣಸಿನಕಾಯಿ – 4
ಕರಿಬೇವು -1 ಎಸಳು

  

ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದು ಪುಡಿ ಮಾಡಿಡಿ. ಮೆಣಸಿನಕಾಯಿಗೆ ಮಾತ್ರ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿ.

ಬೇಳೆ ಕಟ್ಟಿಗೆ ಮಸಾಲ ಪುಡಿ, ಉಪ್ಪು ಹಾಕಿ ಕುದಿಯಲು ಇಡಿ. ಚೆನ್ನಾಗಿ ಕುದಿದ ಮೇಲೆ ಗಟ್ಟಿಯಾದ ಕಾಯಿ ಹಾಲು ಹಾಕಿ ಒಲೆಯಿಂದ ಇಳಿಸಿ.

  

ಕೊನೆಯಲ್ಲಿ ಒಗ್ಗರಣೆಗೆ ಸಾಸಿವೆ, ಇಂಗು, ಅರಿಷಿಣ, ಇಂಗು, ಕರಿಬೇವು ಹಾಕಿ ಸಾರಿಗೆ ಹಾಕಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, 1 ನಿಂಬೆ ಹಣ್ಣಿನ ರಸ ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಅಯ್ಯಂಗಾರ್ ಪೆಪ್ಪರ್ ರಸಂ ಸವಿಯಲು ಸಿದ್ಧ!

ಈ ಸಾರು ಬಿಸಿ ಅನ್ನದೊಡನೆ ಅಥವಾ ಹಾಗೆ ಕುಡಿಯಲು ತುಂಬಾ ಚೆನ್ನಾಗಿರುತ್ತದೆ. ಕಾಯಿ ಹಾಲು ವಿಶೇಷ ರುಚಿ ಕೊಡುತ್ತದೆ.

ಧನ್ಯವಾದಗಳು

Leave a Reply

Your email address will not be published.