ಸಾಂಬಾರು ಮತ್ತು ಪಲ್ಯಗಳು

PUDINA CHUTNEY ಪುದೀನಾ ಚಟ್ನಿ

ಪುದೀನಾ ಸೊಪ್ಪಿನ ರುಚಿಯಾದ ಚಟ್ನಿಯ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ :-

1 ಕಟ್ಟು ಪುದೀನಾ ಸೊಪ್ಪು ಬಿಡಿಸಿ ತೊಳೆದು 1 ಚಮಚ ಎಣ್ಣೆ ಹಾಕಿ ಸ್ವಲ್ಪ ಹುರಿದಿಡಿ.

4 ಟೇಬಲ್ ಚಮಚ ಕಾಯಿ ತುರಿದಿಡಿ.

2 ಟೇಬಲ್ ಚಮಚ ಕಡಲೇ ಬೇಳೆ ಎಣ್ಣೆ ಹಾಕದೆ ಹುರಿದಿಡಿ.

6 ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ.

1 ಚಮಚ ಹುಣಿಸೆ ರಸ ತೆಗೆದಿಡಿ.

Mixie jar ಗೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು, ಉಪ್ಪು, ಸ್ವಲ್ಪ ನೀರು ಹಾಕಿ ರುಬ್ಬಿ.

ಕೊನೆಯಲ್ಲಿ ಒಗ್ಗರಣೆಗೆ ಸಾಸಿವೆ, ಕರಿಬೇವು, ಇಂಗು ಹಾಕಿ ಚಟ್ನಿಗೆ ಸೇರಿಸಿದರೆ ರುಚಿಯಾದ, ಆರೋಗ್ಯಕರವಾದ ಪುದೀನಾ ಚಟ್ನಿ ಸವಿಯಲು ಸಿದ್ಧ!

ಈ ಚಟ್ನಿ ಇಡ್ಲಿ, ದೋಸೆ, ರೊಟ್ಟಿ, ಅನ್ನದೊಂದಿಗೆ ತುಂಬಾ ಚೆನ್ನಾಗಿರುತ್ತದೆ.

ಧನ್ಯವಾದಗಳು

Leave a Reply

Your email address will not be published.