ಸಾಂಬಾರು ಮತ್ತು ಪಲ್ಯಗಳು

BENDI CURRY ಬೆಂಡಿ ಕರ್ರಿ

BENDI CURRY  ಬೆಂಡಿ ಕರ್ರಿ

ಬೆಂಡೆಕಾಯಿಯಿಂದ ಮಾಡಬಹುದಾದ ರುಚಿಯಾದ ಕರ್ರಿಯ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

ಬೆಂಡಿಯನ್ನು 2 ಇಂಚು ಉದ್ದದ ತುಂಡುಗಳನ್ನಾಗಿ ಮಾಡಿ, ಎಣ್ಣೆಯಲ್ಲಿ ಕೆಂಪಾಗುವಂತೆ ಕರಿದು ಇಡಿ.

1 ಈರುಳ್ಳಿ, 2 ಟೋಮೇಟೋ, 1 ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, 12 ರಿಂದ 15 ಗೋಡಂಬಿಯನ್ನು ಎಣ್ಣೆಯಲ್ಲಿ ಹುರಿದು, ರುಬ್ಬಿ ಇಡಿ‌.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಈರುಳ್ಳಿ, ಜೀರಿಗೆ ಹಾಕಿ, ರುಬ್ಬಿದ ಮಿಶ್ರಣ ಹಾಕಿ, 3 ರಿಂದ 4 ನಿಮಿಷ ಬಾಡಿಸಿ ರುಬ್ಬಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ರುಬ್ಬಿದ ಮಿಶ್ರಣವನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಸ್ವಲ್ಪ ಹೊತ್ತು ಬಾಡಿಸಿ, 1/2 ಚಮಚ ಗರಂ ಮಸಾಲ, 1 ಚಮಚ ಖಾರದ ಪುಡಿ, 1/2 ಚಮಚ ಧನಿಯ ಪುಡಿ, ಉಪ್ಪು, ಹುರಿದ ಬೆಂಡಿ, ಸ್ವಲ್ಪ ನೀರು ಹಾಕಿ, 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಕೊನೆಯಲ್ಲಿ ಕೊತ್ತಂಬರಿ, ಫ್ರೆಶ್ ಕ್ರೀಮ್ 2 ಚಮಚ ಹಾಕಿ ಕಲೆಸಿದರೆ ರುಚಿಯಾದ ಬಾಯಲ್ಲಿ ನೀರೂರಿಸುವ ಬೆಂಡಿ ಕರ್ರಿ ಸವಿಯಲು ಸಿದ್ಧ!

ಧನ್ಯವಾದಗಳು 🙏🙏🙏

Leave a Reply

Your email address will not be published.