HUNISE ANNA ಹುಣಿಸೆ ಅನ್ನ
ಹುಣಿಸೆ ಹುಳಿ ಇಷ್ಟ ಪಡುವವರಿಗಾಗಿ ಇಲ್ಲಿದೆ ಸುಲಭವಾಗಿ ಮಾಡಬಹುದಾದ ರೆಸಿಪಿ.
ಮಾಡುವ ವಿಧಾನ:-
1 ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಿನಲ್ಲಿ ನೆನೆಸಿ ರಸ ತೆಗೆದಿಡಿ.
4 ಚಮಚ ಒಣ ಕೊಬ್ಬರಿ ತುರಿದಿಡಿ.
ಕಡಲೇ ಬೇಳೆ – 1 ಟೇಬಲ್ ಚಮಚ
ಉದ್ದಿನ ಬೇಳೆ – 1 ಟೇಬಲ್ ಚಮಚ
ಧನಿಯಾ – 1 ಟೇಬಲ್ ಚಮಚ
ಬಿಳಿ ಎಳ್ಳು – 2 ಟೇಬಲ್ ಚಮಚ

ಮೇಲೆ ಹೇಳಿರುವ ಅಷ್ಟು ಸಾಮಗ್ರಿಗಳನ್ನು ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.
10 ರಿಂದ 12 ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ.

ಬಾಣಲೆಯಲ್ಲಿ 6 ಚಮಚ ಎಣ್ಣೆ ಹಾಕಿ ಒಂದು ಹಿಡಿ ಕಡಲೇ ಬೀಜ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, 1/2 ಟೀ ಚಮಚ ಇಂಗು, ಅರಿಷಿಣ, ಕರಿಬೇವು ಒಗ್ಗರಣೆ ಹಾಕಿ ಹುಣಿಸೆ ರಸ ಹಾಕಿ ಚೆನ್ನಾಗಿ ಕುದಿಸಿ. ನಂತರ ಮಾಡಿಟ್ಟ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಚಿಕ್ಕ ನೆಲ್ಲಿ ಕಾಯಿ ಗಾತ್ರದ ಬೆಲ್ಲ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಕುದಿಸಿ.

ಎಣ್ಣೆ ಅಂಶ ಮೇಲೆ ಬರುವವರೆಗೆ ಕುದಿಸಿ ನಂತರ ಅನ್ನ, ಹುರಿದ ಕಡಲೇ ಬೀಜ, ಕೊಬ್ಬರಿ ತುರಿ ಹಾಕಿ ಕಲೆಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಹುಣಿಸೆ ಅನ್ನ ಸವಿಯಲು ಸಿದ್ಧ!
ಈ ರೆಸಿಪಿಯಲ್ಲಿ ಸ್ವಲ್ಪ ಎಣ್ಣೆ ಹೆಚ್ಚು ಬೇಕಾಗುತ್ತದೆ.

ಧನ್ಯವಾದಗಳು 🙏🙏🙏
