ಖಾರ ತಿನಿಸುಗಳು

RIBBON MURUKKU ರಿಬ್ಬನ್ ಮುರುಕ್ಕು

ಇದು ಬಹಳ ಹಳೆಯ ರೆಸಿಪಿ. ಗೋಕುಲಾಷ್ಟಮಿಯಲ್ಲಿ ನಮ್ಮ ಮನೆಯಲ್ಲಿ ತಪ್ಪದೆ ಮಾಡುವ ತಿಂಡಿ. ಸುಲಭವಾಗಿ ಮಾಡಬಹುದಾದ ರುಚಿಯಾದ ತಿಂಡಿ!

ಮಾಡುವ ವಿಧಾನ:-

ಅಕ್ಕಿ ಹಿಟ್ಟು – 2ಕಪ್
ಹುರಿಗಡಲೆ ಪುಡಿ ( ಪುಟಾಣಿ ) – 1 ಕಪ್
ಬಿಳಿ ಎಳ್ಳು – 1 ಟೇಬಲ್ ಚಮಚ
ಖಾರದ ಪುಡಿ – 1 ಟೇಬಲ್ ಚಮಚ
ಇಂಗು – 1 ಟೀ ಚಮಚ
ಜೀರಿಗೆ – 1 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಬಿಸಿ ಎಣ್ಣೆ/ ಬೆಣ್ಣೆ – 1 ಟೇಬಲ್ ಚಮಚ

ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೃದುವಾದ ಹಿಟ್ಟು ಕಲೆಸಿ. ಸುಮಾರು 1 1/2 – 1 3/4 ಕಪ್ ನೀರು ಬೇಕಾಗಬಹುದು. ನೋಡಿಕೊಂಡು ನೀರು ಹಾಕಿ ಹಿಟ್ಟು ಕಲೆಸಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಚಕ್ಕುಲಿ ಒರಳಿಗೆ ಎಣ್ಣೆ ಸವರಿ, ಮುರುಕು ಮಾಡುವ ಬಿಲ್ಲೆ ಹಾಕಿ, ಕಲೆಸಿದ ಮಿಶ್ರಣವನ್ನು ತುಂಬಿ ಎಚ್ಚರಿಕೆಯಿಂದ ನೇರವಾಗಿ ಮುರುಕು ಹಿಂಡಿ.

ಉರಿ ಕಡಿಮೆ ಮಾಡಿ ಗರಿ ಗರಿಯಾಗಿ ಆಗುವವರೆಗೆ ಕರಿದು ತೆಗೆದಿಡಿ.

ಸ್ವಲ್ಪ ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವಾರವಾದರೂ ಗರಿ ಗರಿಯಾಗಿರುತ್ತದೆ. ಸಂಜೆ ಕಾಫಿ, ಟೀ ಜೊತೆಗೆ ಖಾರ ಖಾರವಾದ, ಗರಿ ಗರಿಯಾದ ರಿಬ್ಬನ್ ಮುರುಕು ತಿಂದು ನೋಡಿ!

ಧನ್ಯವಾದಗಳು

Leave a Reply

Your email address will not be published.