ಖಾರ ತಿನಿಸುಗಳು

RICE CUTLET ರೈಸ್ ಕಟ್ಲೆಟ್

RICE CUTLET ರೈಸ್ ಕಟ್ಲೆಟ್

ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಪ್ರತಿ ದಿನ ಅನ್ನ ಮಾಡುತ್ತಾರೆ. ಒಂದೊಂದು ಸಲ ಮಾಡಿದ ತಿನ್ನದೆ ಅನ್ನ ಹಾಗೇ ಉಳಿದುಹೋದಾಗ ಹೀಗೆ ಮಾಡಿದರೆ ಕಣ್ಣು ಮುಚ್ಚಿ ತೆಗೆಯುವುದರಲ್ಲಿ ಫಟಾಫಟ್ ಖಾಲಿ ಆಗುತ್ತದೆ!

ಮಾಡುವ ವಿಧಾನ :-

ಅನ್ನವನ್ನು ಸ್ವಲ್ಪ ಬಿಸಿ ಮಾಡಿ ಚೆನ್ನಾಗಿ ಮ್ಯಾಶ್ ಮಾಡಿಡಿ.

ಎರಡು ಚಮಚ ಕಾರ್ನ್ ಫ್ಲೋರ್, ಎರಡು ಚಮಚ ಮೈದಾ ಹಿಟ್ಟನ್ನು ಸ್ವಲ್ಪ ಉಪ್ಪು ಸೇರಿಸಿ ತೆಳ್ಳಗೆ ಕಲೆಸಿಡಿ. ಒಂದು ತಟ್ಟೆಯಲ್ಲಿ ಸ್ವಲ್ಪ ಬ್ರೆಡ್ ಕ್ರಂಬ್ಸ್ ಹಾಕಿಡಿ.

ಎರಡು ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ. ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಡಿ/ತುರಿದಿಡಿ. ನಾಲ್ಕು ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಅನ್ನಕ್ಕೆ ತರಕಾರಿಗಳು, ಒಂದು ಚಮಚ ಆಮ್ ಚೂರ್ ಪುಡಿ, ಒಂದು ಚಮಚ ಚಾಟ್ ಮಸಾಲ, ಅರ್ಧ ಚಮಚ ಅರಿಷಿಣ ಪುಡಿ, ಅರ್ಧ ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ನಾಲ್ಕು ಚಮಚ ಬ್ರೆಡ್ ಕ್ರಂಬ್ಸ್ ಹಾಕಿ ಚೆನ್ನಾಗಿ ಕಲೆಸಿ.

ನಿಮಗೆ ಬೇಕಾದ ಅಳತೆಯ ಉಂಡೆ ಮಾಡಿ ಕಟ್ಲೆಟ್ ಆಕಾರ ಕೊಟ್ಟು ಮೈದಾ ಮಿಶ್ರಣದಲ್ಲಿ ಅದ್ದಿ ಬ್ರೆಡ್ ಕ್ರಂಬ್ಸ್ ಮೇಲೆ ಹೊರಳಿಸಿ ಬಿಸಿ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಕರಿದು ನಿಮಗೆ ಇಷ್ಟವಾದ ಸಾಸ್ ಅಥವಾ ಚಟ್ನಿ ಜೊತೆಗೆ ಸವಿಯಿರಿ!

ನಾನು ಎಣ್ಣೆಯಲ್ಲಿ ಕರಿದಿದ್ದೀನಿ . ಬೇಕಾದರೆ ಕಬ್ಬಿಣದ ತವಾ ಮೇಲೆ ಸ್ವಲ್ಪ ಎಣ್ಣೆ ಹಾಕಿ Shallow fry ಮಾಡಬಹುದು.

ಅನ್ನದ ಬದಲು ಗಟ್ಟಿ ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿ, ನೀರು ಸೋರಿ ಹಾಕಿ ಪುಡಿ ಮಾಡಿ ಮಾಡಬಹುದು.

ಈ ಕಟ್ಲೆಟ್ ತುಂಬಾ ರುಚಿಯಾಗಿರುತ್ತದೆ. ಮನೆಯವರು ಇಷ್ಟ ಪಟ್ಟು ತಿನ್ನುತ್ತಾರೆ. ಇದನ್ನು ಉಳಿದ ಅನ್ನದಿಂದ ಮಾಡಿದ್ದು ಅಂತ ಯಾರಿಗೂ ಹೇಳಬೇಡಿ ಪ್ಲೀಸ್!

ಧನ್ಯವಾದಗಳು 🙏🙏🙏

Leave a Reply

Your email address will not be published.