MASALA SHANKARA POLI ಮಸಾಲ ಶಂಕರ ಪೋಳಿ
ಶಂಕರ ಪೋಳಿ ಎಲ್ಲರಿಗೂ ಇಷ್ಟವಾಗುವ, ಸುಲಭವಾಗಿ ಮಾಡಬಹುದಾದ ತಿಂಡಿ. ಸಾಧಾರಣವಾಗಿ ಎಲ್ಲರೂ ಸಿಹಿ ಶಂಕರ ಪೋಳಿ ಮಾಡುತ್ತಾರೆ. ಹೀಗೊಂದು ಸಲ ಮಾಡಿ ನೋಡಿ. ಖಂಡಿತ ನಿಮಗೆ ಇಷ್ಟ ಆಗುತ್ತದೆ.
ಮಾಡುವ ವಿಧಾನ :-
1 ಮಾಗಿದ ತೋತಾಪುರಿ ಸಿಪ್ಪೆ ತೆಗೆದು ತುರಿದು ನೀರು ಸೇರಿಸದೆ ನುಣ್ಣಗೆ ರುಬ್ಬಿಡಿ.

1 ಚಮಚ ಜೀರಿಗೆ, 1/2 ಚಮಚ ಕರಿ ಮೆಣಸು ತರಿ ತರಿಯಾಗಿ ಪುಡಿ ಮಾಡಿಡಿ.

1/2 ಕಪ್ ಮೈದಾ, 1/2 ಕಪ್ ಚಿರೋಟಿ ರವೆ, ರುಬ್ಬಿದ ಮಿಶ್ರಣ, ಮೆಣಸು ಜೀರಿಗೆ ಪುಡಿ, 1 ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಹಾಕಿ ಚೆನ್ನಾಗಿ ಕಲೆಸಿ. 1 ಚಮಚ ಬಿಸಿ ಎಣ್ಣೆ ಹಾಕಿ ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ಕಲೆಸಿಡಿ. ಮಾವಿನ ಕಾಯಿಯಲ್ಲಿ ನೀರಿನಂಶ ಇರುವುದರಿಂದ ಸ್ವಲ್ಪ ನೀರು ಚಿಮುಕಿಸುತ್ತಾ ಹಿಟ್ಟು ಕಲೆಸಿಡಿ.

ಕಲೆಸಿದ ಹಿಟ್ಟನ್ನು ಚಪಾತಿ ಉಂಡೆಯಷ್ಟು ತೆಗೆದು ಕೊಂಡು, ಆದಷ್ಟೂ ತೆಳ್ಳಗೆ ಲಟ್ಟಿಸಿ.
ಫೋರ್ಕ್ ಅಥವಾ ಚಾಕುವಿನಿಂದ ಅಲ್ಲಲ್ಲಿ ತೂತು ಮಾಡಿ. ಆಗ ಶಂಕರ ಪೋಳಿ ಉಬ್ಬುವುದಿಲ್ಲ. ನಂತರ Diamond ಆಕಾರದಲ್ಲಿ ಕತ್ತರಿಸಿ, ಬಿಸಿ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕೆಂಪಗೆ ಗರಿ ಗರಿಯಾಗುವವರೆಗೆ ಕರಿದು ಹೆಚ್ಚಿನ ಎಣ್ಣೆ ತೆಗೆದು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವಾರವಾದರೂ ಗರಿ ಗರಿಯಾಗಿರುತ್ತದೆ.

ತಾಜಾ ಮಾವಿನ ಕಾಯಿ ಸಿಗದಿದ್ದರೆ ಆಮ್ ಚೂರ್ ಪುಡಿ ಹಾಕಿ ಮಾಡಬಹುದು.

ಧನ್ಯವಾದಗಳು 🙏🙏🙏
