ಸಿಹಿ ತಿನಿಸುಗಳು

BESAN HOLIGE ಬೇಸನ್ ಹೋಳಿಗೆ

BESAN HOLIGE ಬೇಸನ್ ಹೋಳಿಗೆ

ಹೋಳಿಗೆ ಒಂದು ಜನಪ್ರಿಯ ಸಾಂಪ್ರಾದಾಯಕ ಸಿಹಿ. ಈ ಜನಪ್ರಿಯ ಸಿಹಿಯನ್ನು ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ. ಈ ಹೋಳಿಗೆ ಮಾಡಲು ಬೇಳೆ ಬೇಯಿಸುವ, ರುಬ್ಬುವ ಕೆಲಸ ಇಲ್ಲ. ಸುಲಭವಾಗಿ, ಬೇಗನೆ ಮಾಡಬಹುದು.

ಮಾಡುವ ವಿಧಾನ :-

ಕಣಕ ಮಾಡಲು:-

ಅರ್ಧ ಅಳತೆ ಮೈದಾ, ಅರ್ಧ ಅಳತೆ ಚಿರೋಟಿ ರವೆ, ಚಿಟಿಕೆ ಉಪ್ಪು, ಚಿಟಿಕೆ ಅರಿಷಿಣ, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಸೇರಿಸಿ ಮೃದುವಾದ ಹಿಟ್ಟು ಕಲೆಸಿಡಿ. ಮೇಲೆ ಸ್ವಲ್ಪ ಎಣ್ಣೆ ಹಾಕಿ ಅರ್ಧ ಗಂಟೆ ಮುಚ್ಚಿಡಿ.

ಹೂರಣ ಮಾಡಲು:-

1 ಅಳತೆ ಕಡಲೇ ಹಿಟ್ಟು ಘಮಘಮಿಸುವ ಹಾಗೆ ಕಡಿಮೆ ಉರಿಯಲ್ಲಿ ಹುರಿದಿಡಿ.

1 ಅಳತೆ ಕಾಯಿ ತುರಿದಿಡಿ.

1 ಅಳತೆ ಬೆಲ್ಲ ಪುಡಿ ಮಾಡಿಡಿ.

4 ಏಲಕ್ಕಿ ಪುಡಿ ಮಾಡಿಡಿ.

ಬಾಣಲೆಯಲ್ಲಿ ಬೆಲ್ಲ ಮುಳುಗುವಷ್ಟು ನೀರು ಹಾಕಿ ಕುದಿಯಲು ಇಡಿ. ಬೆಲ್ಲ ಸಂಪೂರ್ಣವಾಗಿ ಕರಗಿದ ಮೇಲೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಕಡಿಮೆ ಉರಿಯಲ್ಲಿ ಸ್ವಲ್ಪ ಬೇಯಿಸಿ. ಕೊನೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಕೆಳಗಿಳಿಸಿ.

ಕಣಕದಲ್ಲಿ ಸಣ್ಣ ಉಂಡೆ ಮಾಡಿ ಮಧ್ಯೆ ಹೂರಣದ ಉಂಡೆ ಇಟ್ಟು ಹೋಳಿಗೆ ತಟ್ಟಿ ಕಾದ ಕಾವಲಿ ಮೇಲೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿದರೆ ಸುಲಭವಾಗಿ ಮಾಡಬಹುದಾದ ಬೇಸನ್ ಹೋಳಿಗೆ ಸವಿಯಲು ಸಿದ್ಧ!

ಧನ್ಯವಾದಗಳು 🙏🙏🙏

Leave a Reply

Your email address will not be published.