ಸಿಹಿ ತಿನಿಸುಗಳು

HURIDAKKI UNDE SHIVARATRI SPECIAL

HURIDAKKI UNDE SHIVARATRI SPECIAL

ಹುರಿದಕ್ಕಿ ಉಂಡೆ
ಶಿವರಾತ್ರಿ ವಿಶೇಷ

ಮಹಾ ಶಿವರಾತ್ರಿ ಹಬ್ಬದ ಸಮಯದಲ್ಲಿ ಮಾಡುವ ಹುರಿದಕ್ಕಿ ಉಂಡೆಯಂತೆ ರೆಸಿಪಿ ಇಲ್ಲಿದೆ! ಇದು ನಮ್ಮ ಅಮ್ಮ ಮಾಡುತ್ತಿದ್ದ ವಿಧಾನ. ತಿಂಗಳಾದರೂ ಈ ಉಂಡೆ ಕೆಡುವುದಿಲ್ಲ.

ಮಾಡುವ ವಿಧಾನ :-

ಒಂದು ಲೋಟ ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ನಸು ಕೆಂಪಗೆ, ಪೂರ್ತಿಯಾಗಿ ಉಬ್ಬುವವರೆಗೆ ಹುರಿದು ತಣ್ಣಗಾದ ಮೇಲೆ ನುಣ್ಣಗೆ ಪುಡಿ ಮಾಡಿ ಜರಡಿ ಹಿಡಿದಿಡಿ. ಅಕ್ಕಿಯನ್ನು ತೊಳೆಯದೆ ಹುರಿಯ ಬೇಕು. ಯಾವುದೇ ರೀತಿಯ ಅಕ್ಕಿ ಬೇಕಾದರೂ ಉಪಯೋಗಿಸಬಹುದು.

ಅರ್ಧ ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು ಸ್ವಲ್ಪ ಪುಡಿ ಮಾಡಿಡಿ.

ಅರ್ಧ ಲೋಟ ಒಣ ಕೊಬ್ಬರಿ ತುರಿದಿಡಿ.

ನಾಲ್ಕು ಏಲಕ್ಕಿ ಪುಡಿ ಮಾಡಿಡಿ.

ನಾಲ್ಕು ಚಮಚ ಬಿಳಿ ಎಳ್ಳು ಹುರಿದಿಡಿ.

ಅರ್ಧ ಲೋಟ ಹುರಿಗಡಲೆ ಆರಿಸಿಡಿ.

ಒಂದೂಕಾಲು ಲೋಟ ಬೆಲ್ಲ ಪುಡಿ ಮಾಡಿ ಅರ್ಧ ಲೋಟ ನೀರು ಹಾಕಿ ಕುದಿಯಲು ಇಡಿ.

ಒಂದು ದೊಡ್ಡ ಬಟ್ಟಲಿನಲ್ಲಿ ಎಲ್ಲಾ ಸಾಮಗ್ರಿಗಳು ಹಾಕಿಡಿ.

ಬೆಲ್ಲ ಕರಗಿ ಕುದಿಯಲು ಆರಂಭವಾಗಿ ಅಂಟು ಪಾಕ ಬರಲು ಬಂದ ತಕ್ಷಣ ಒಲೆಯಿಂದ ಇಳಿಸಿ. ಎಳೆ ಪಾಕ ಬರುವ ಅವಶ್ಯಕತೆ ಇಲ್ಲ .

ಎಲ್ಲಾ ಸಾಮಗ್ರಿಗಳನ್ನು ಒಂದು ಸಲ ಚೆನ್ನಾಗಿ ಕಲೆಸಿ ಬೆಲ್ಲದ ಪಾಕ ಸ್ವಲ್ಪ ಸ್ವಲ್ಪವೇ ಹಾಕಿ ಕೊಂಡು ಉಂಡೆ ಕಟ್ಟುವ ಹದಕ್ಕೆ ಹಾಕಿಕೊಂಡು ನಿಮಗೆ ಬೇಕಾದ ಅಳತೆಯ ಉಂಡೆ ಕಟ್ಟಿ ಸವಿಯಿರಿ.

ಪಾಕ ಒಟ್ಟಿಗೆ ಹಾಕುವ ಬದಲು ಬೇಕಾದಷ್ಟು ಹಾಕಿಕೊಂಡು ಉಂಡೆ ಕಟ್ಟಿ.

ಧನ್ಯವಾದಗಳು 🙏🙏🙏

Leave a Reply

Your email address will not be published.