MOLAKE MENTHYA KOSAMBARI ಮೊಳಕೆ ಮೆಂತ್ಯ ಕೋಸಂಬರಿ
ಮೆಂತ್ಯ ಕಾಳು ದೇಹಕ್ಕೆ ತಂಪು, ಮಧುಮೇಹವನ್ನು ಹತೋಟಿಯಲ್ಲಿಡುತ್ತದೆ. ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ. ಇಂತಹ ಆರೋಗ್ಯಕರವಾದ ಮೆಂತ್ಯ ಕಾಳು ಮೊಳಕೆ ಬಂದ ಮೇಲೆ ಮತ್ತಷ್ಟು ಆರೋಗ್ಯಕರವಾಗಿರುತ್ತದೆ. ಇದರಿಂದ ರುಚಿಯಾದ ಕೋಸಂಬರಿ ಮಾಡುವ ವಿಧಾನ ಇಲ್ಲಿದೆ.
ಮಾಡುವ ವಿಧಾನ :-
ಮೆಂತ್ಯ ಕಾಳು ನೆನೆಸಿ ಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರಲು ಬಿಡಿ.
ಮರುದಿನ ಒಂದು ಸೌತೆಕಾಯಿ ಕಹಿ ತೆಗೆದು, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.
1/2 ಹೋಳು ಕಾಯಿ ತುರಿದಿಡಿ.
ನಾಲ್ಕು ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಬಟ್ಟಲಿನಲ್ಲಿ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ನಿಂಬೆ ರಸ ಹಾಕಿ ಕಲೆಸಿಡಿ. ಕೊನೆಯಲ್ಲಿ ಸಾಸಿವೆ, ಇಂಗು ಹಾಕಿ ಒಗ್ಗರಣೆ ಹಾಕಿದರೆ ಆರೋಗ್ಯಕರವಾದ, ರುಚಿಯಾದ ಮೊಳಕೆ ಮೆಂತ್ಯ ಕೋಸಂಬರಿ ಸವಿಯಲು ಸಿದ್ಧ.
ಮೊಳಕೆ ಬಂದ ಮೇಲೆ ಮೆಂತ್ಯ ಕಹಿ ಕಡಿಮೆ ಆಗಿರುತ್ತದೆ. ಕೆಲವರು ಹಾಗೆ ಹಸಿ ಕಾಳನ್ನು ತಿನ್ನುತ್ತಾರೆ. ಹೀಗೆ ಕೋಸಂಬರಿ ಮಾಡಿ ತಿನ್ನುವುದರಿಂದ ರುಚಿ ಕೂಡ ಚೆನ್ನಾಗಿರುತ್ತದೆ.

ಧನ್ಯವಾದಗಳು 🙏🙏🙏
