ಸಿಹಿ ತಿನಿಸುಗಳು

DRY FRUITS & BELLADA SHANKARA POLI ಡ್ರೈ ಫ್ರೂಟ್ಸ್ ಮತ್ತು ಬೆಲ್ಲದ ಶಂಕರ ಪೋಳಿ

DRY FRUITS & BELLADA SHANKARA POLI ಡ್ರೈ ಫ್ರೂಟ್ಸ್ ಮತ್ತು ಬೆಲ್ಲದ ಶಂಕರ ಪೋಳಿ

ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜೊತೆಗೆ ಬೆಲ್ಲ ಕೂಡಾ! ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಮತ್ತಷ್ಟು ಒಳ್ಳೆಯದು! ಮಕ್ಕಳು ಸಿಹಿ ತಿಂಡಿಗಳನ್ನು ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಡ್ರೈ ಫ್ರೂಟ್ಸ್ ಹಾಕಿ ಸಿಹಿ ತಿಂಡಿ ಮಾಡಿಕೊಡಿ ಮತ್ತಷ್ಟು ಇಷ್ಟ ಪಟ್ಟು ತಿನ್ನುತ್ತಾರೆ!

ಮಾಡುವ ವಿಧಾನ:

1/2 ಬಟ್ಟಲು ಮೈದಾ, 1/2 ಬಟ್ಟಲು ಚಿರೋಚಿ ರವೆ, 2 ಚಮಚ ಅಕ್ಕಿ ಹಿಟ್ಟು, 1/2 ಬಟ್ಟಲು ಬೆಲ್ಲದ ಪುಡಿ, ಚಿಟಿಕೆ ಏಲಕ್ಕಿ ಪುಡಿ, 1 ಚಮಚ ಬೆಣ್ಣೆ/1 ಚಮಚ ಕಾದ ಎಣ್ಣೆ ಪಾತ್ರೆಯಲ್ಲಿ ಹಾಕಿಡಿ.

ಎರಡು ಹಿಡಿ ಬಾದಾಮಿ, ಒಂದು ಹಿಡಿ ಗೋಡಂಬಿ, 8 ವಾಲ್ ನಟ್, 15 ಪಿಸ್ತಾ ಇಷ್ಚು ನುಣ್ಣಗೆ ಪುಡಿ ಮಾಡಿ ಮೈದಾ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಕಲೆಸಿ 10 ನಿಮಿಷ ಮುಚ್ಚಿಡಿ.

ಚಪಾತಿ ಉಂಡೆಗಿಂತ ಸ್ವಲ್ಪ ದಪ್ಪ ಉಂಡೆ ತೆಗೆದುಕೊಂಡು ತೆಳ್ಳಗೆ ಲಟ್ಟಿಸಿ, ಫೋರ್ಕ್ ನಿಂದ ಅಲ್ಲಲ್ಲಿ ಚುಚ್ಚಿ ನಿಮಗೆ ಬೇಕಾದ ಆಕಾರದಲ್ಲಿ ಕಟ್ ಮಾಡಿ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಕರಿದು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ 1 ವಾರದ ತನಕ ಗರಿ ಗರಿಯಾಗಿ ಇರುತ್ತದೆ.

ಡ್ರೈ ಫ್ರೂಟ್ಸ್ ಮತ್ತು ಬೆಲ್ಲ ಹಾಕಿರುವುದರಿಂದ ಬಣ್ಣ ಸ್ವಲ್ಪ ಕಂದು ಇರುತ್ತದೆ! ಬೆಳ್ಳಗೆ ಇರುವುದಿಲ್ಲ!

ನಾನು ಹಾಕಿರುವುದು Organic ಬೆಲ್ಲ. ಅದರಲ್ಲಿ ಯಾವುದೆ ಕಲ್ಲು ಇರುವುದಿಲ್ಲ. ಸಾಧಾರಣ ಬೆಲ್ಲ ಹಾಕುವುದಾದರೆ ಪುಡಿ ಮಾಡಿ, ಕರಗಿಸಿ, ಶೋಧಿಸಿ ಹಾಕಿ.

ಧನ್ಯವಾದಗಳು 🙏🙏🙏

Leave a Reply

Your email address will not be published.