ಖಾರ ತಿನಿಸುಗಳು

VADA CURRY ವಡಾ ಕರ್ರಿ

VADA CURRY ವಡಾ ಕರ್ರಿ

ಪ್ರತಿ ದಿನ ಚಪಾತಿ, ದೋಸೆ, ಇಡ್ಲಿ ಜೊತೆಗೆ ಗ್ರೇವಿ, ಪಲ್ಯ, ಸಾಂಬಾರ್, ಚಟ್ನಿ ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ. ಖಂಡಿತಾ ನಿಮಗೆ ಇಷ್ಟ ಆಗುತ್ತದೆ. ಮಾಡುವುದು ಸುಲಭ ಕೂಡ.

ವಡಾ ಕರ್ರಿ ಮಾಡುವ ವಿಧಾನ :-

ನೀವು ಸಾದಾರಣವಾಗಿ ಮಾಡುವ ವಿಧಾನದಲ್ಲಿ ಕಡಲೇ ಬೇಳೆ ವಡೆಯನ್ನು ಪುಟ್ಟ ಪುಟ್ಟದಾಗಿ ಮಾಡಿಡಿ. ಸಿದ್ಧವಾದ ವಡೆ ಹಿಟ್ಟು ಒಂದು ಚಮಚದಷ್ಟು ಒಗ್ಗರಣೆಗೆ ಹಾಕಲು ತೆಗೆದಿಡಿ.

1 ಈರುಳ್ಳಿ, 3 ಟೋಮೇಟೋ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ. ನಂತರ ಟೋಮೇಟೋ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಅರ್ಧ ಚಮಚ ಅರಿಷಿಣ, ಅರ್ಧ ಚಮಚ ಗರಂ ಮಸಾಲ, 1 ಚಮಚ ಖಾರದ ಪುಡಿ, 1 ಚಮಚ ವಡೆ ಹಿಟ್ಟು ಹಾಕಿ ಚೆನ್ನಾಗಿ ಬಾಡಿಸಿ.

ನಂತರ ಸ್ವಲ್ಪ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಇಡಿ. ನಂತರ ಮಾಡಿಟ್ಟ ವಡೆ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ ಮೂರ್ನಾಲ್ಕು ನಿಮಿಷ ಕುದಿಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ವಡಾ ಕರ್ರಿ ಸವಿಯಲು ಸಿದ್ಧ.

ನೀವು ಬೇಕಾದರೆ ಹೀಗೆ ಪುಟ್ಟ ಪುಟ್ಟ ವಡೆಯ ಬದಲು ದೊಡ್ಡ ವಡೆ ಮಾಡಿ ಚಿಕ್ಕ ಚಿಕ್ಕದಾಗಿ ತುಂಡು ಮಾಡಿ ಹಾಕಬಹುದು.

ಹೆಚ್ಚಿನ ರುಚಿಗಾಗಿ ಫ್ರೆಶ್ ಕ್ರೀಮ್ ಅಥವಾ ಕಾಯಿ ಹಾಲು ಕೊನೆಯಲ್ಲಿ ಸೇರಿಸಬಹುದು. ನಾನು ಹಾಕಿಲ್ಲ.

ಧನ್ಯವಾದಗಳು 🙏🙏🙏

Leave a Reply

Your email address will not be published.