ಉಪಹಾರ

THEPLA ತೇಪ್ಲಾ

THEPLA ತೇಪ್ಲಾ

ಗುಜರಾತಿನ ಜನಪ್ರಿಯ ಆಹಾರ. ಆರೋಗ್ಯಕರ, ರುಚಿಕರ. ಸುಲಭವಾಗಿ ಮಾಡಬಹುದು.

ಮಾಡುವ ವಿಧಾನ :-

2 ಕಟ್ಟು ಮೆಂತ್ಯ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ.

ಅರ್ಧ ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.

ಬಟ್ಟಲಿನಲ್ಲಿ ಒಂದು ಬಟ್ಟಲು ಗೋಧಿ ಹಿಟ್ಟು, 2 ಚಮಚ ಕಡಲೇ ಹಿಟ್ಟು, ಹೆಚ್ಚಿದ ಮೆಂತ್ಯ ಸೊಪ್ಪು, ಶುಂಠಿ ತುರಿ, 1/2 ಚಮಚ ಜೀರಿಗೆ ಅಥವಾ ಓಂ ಕಾಳು, 1/2 ಚಮಚ ಖಾರದ ಪುಡಿ, ಉಪ್ಪು, 1 /2 ಚಮಚ ಅರಿಷಿಣ, 1/2 ಚಮಚ ಗರಂ ಮಸಾಲ, 1 ಚಮಚ ಎಣ್ಣೆ, 4 ಚಮಚ ಗಟ್ಟಿಯಾದ ತಾಜಾ ಮೊಸರು ಹಾಕಿ ಚೆನ್ನಾಗಿ ಕಲೆಸಿ. ಬೇಕಾದರೆ ಸ್ವಲ್ಪ ನೀರು ಚಿಮುಕಿಸಿ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ ಹತ್ತು ನಿಮಿಷ ಮುಚ್ಚಿಡಿ.

ನಂತರ ಚಿಕ್ಕ ಉಂಡೆಗಳನ್ನು ಮಾಡಿ ತೆಳ್ಳಗೆ ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ ಎರಡೂ ಕಡೆ ಸ್ವಲ್ಪ ಎಣ್ಣೆ ಸವರಿ ಬೇಯಿಸಿದದೆ ರುಚಿಯಾದ ತೇಪ್ಲಾ ಸವಿಯಲು ಸಿದ್ಧ.

ಧನ್ಯವಾದಗಳು 🙏🙏🙏

Leave a Reply

Your email address will not be published.