ಸಿಹಿ ತಿನಿಸುಗಳು

BELLADA RAVE UNDE ಬೆಲ್ಲದ ರವೆ ಉಂಡೆ

BELLADA RAVE UNDE ಬೆಲ್ಲದ ರವೆ ಉಂಡೆ

ರವೆ ಉಂಡೆ ಸುಲಭವಾಗಿ ಮಾಡಬಹುದಾದ ಸಿಹಿ ರೆಸಿಪಿ. ಮಾಡಿಟ್ಟರೆ 1 ವಾರವಾರವರೂ ಚೆನ್ನಾಗಿರುತ್ತದೆ. ಸಾಧಾರಣವಾಗಿ ಎಲ್ಲರೂ ಇದನ್ನು ಸಕ್ಕರೆ ಹಾಕಿ ಮಾಡುವುದು. ಆರೋಗ್ಯಕರವಾದ ಬೆಲ್ಲ ಹಾಕಿ ಮಾಡಿರುವುದು ಈ ರೆಸಿಪಿಯ ವಿಶೇಷತೆ!

ಮಾಡುವ ವಿಧಾನ:-

1 ಅಳತೆ ಬೆಲ್ಲ, 4 ಏಲಕ್ಕಿ ಸಿಪ್ಪೆ ಬಿಡಿಸಿ ಹಾಕಿ ಪುಡಿ ಮಾಡಿಡಿ.

1 ಗಿಟುಕು ಕೊಬ್ಬರಿ ತುರಿದಿಡಿ.

ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ತುಂಡರಿಸಿದ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಒಂದು ಅಳತೆ ಚಿರೋಟಿ ರವೆ ಹಾಕಿ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ.

ಬೆಲ್ಲದ ಪುಡಿ, ಹುರಿದ ರವೆ, ಒಣ ಕೊಬ್ಬರಿ ತುರಿ ಎಲ್ಲಾ ಸೇರಿಸಿ Mixie ಯಲ್ಲಿ ಒಂದು ಸುತ್ತು ಹಾಕಿ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ಬೆಚ್ಚಗಿರುವ ಹಾಲು ಅಥವಾ ನೀರು ಚಿಮುಕಿಸಿ ನಿಮಗೆ ಬೇಕಾದ ಅಳತೆಯ ಉಂಡೆ ಕಟ್ಟಿ ಸವಿಯಿರಿ.

ನಾನು ಹಾಕಿರುವುದು Organic ಬೆಲ್ಲದ ಪುಡಿ. ಹಾಗಾಗಿ ಈ ಬಣ್ಣ ಬಂದಿದೆ! ಸಾಧಾರಣ ಬೆಲ್ಲ ಹಾಕಿದರೆ ಬಿಳಿ ಬಣ್ಣದ ರವೆ ಉಂಡೆ ಮಾಡಬಹುದು.

ಧನ್ಯವಾದಗಳು🙏🙏🙏

Leave a Reply

Your email address will not be published.