ಸಿಹಿ ತಿನಿಸುಗಳು

MANGO LADDU ಮ್ಯಾಂಗೋ ಲಡ್ಡು

MANGO LADDU ಮ್ಯಾಂಗೋ ಲಡ್ಡು

ಈಗ ಮಾವಿನ ಹಣ್ಣಿನ ಸೀಸನ್. ಹಣ್ಣುಗಳ ರಾಜನೆಂದೆ ಪ್ರಸಿದ್ಧಿಯಾದ ಮಾವಿನ ಹಣ್ಣಿನ ರುಚಿಯಾದ, ಸುಲಭವಾಗಿ ಮಾಡಬಹುದಾದ ಒಂದು ರೆಸಿಪಿ ಇಲ್ಲಿದೆ:-

ಮಾಡುವ ವಿಧಾನ:-

ಒಂದು ಅಳತೆ ಚೆನ್ನಾಗಿ ಮಾಗಿದ ಮಾವಿನ ಹಣ್ಣು ತೊಳೆದು, ಸಿಪ್ಪೆ ತೆಗೆದು ನೀರು ಸೇರಿಸದೆ ರುಬ್ಬಿಡಿ.


1 ಅಳತೆ desiccated coconut powder ಅನ್ನು (ಸೂಪರ್ ಮಾರ್ಕೆಟ್ ನಲ್ಲಿ ಸಿಗುತ್ತೆ, ಕೇಕ್, ಸ್ವೀಟ್ಸ್ ಮಾಡಲು ಉಪಯೋಗಿಸುತ್ತಾರೆ) ದಪ್ಪ ತಳದ ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ 2 ಅಥವಾ 3 ನಿಮಿಷ ಹುರಿದು, ಮಾವಿನ ಹಣ್ಣಿನ ರಸ, 1/2 ಅಳತೆ condensed milk ಹಾಕಿ ಕಡಿಮೆ ಉರಿಯಲ್ಲಿ ಕೆದಕುತ್ತಾ ಇರಿ, ಮಿಶ್ರಣ ಎಲ್ಲಾ ಒಂದೇ ಕಡೆ ಉಂಡೆಯಂತೆ ಆದಾಗ ಒಲೆಯಿಂದ ತೆಗೆದು ಇಡಿ, ಸ್ವಲ್ಪ ಬೆಚ್ಚಗೆ ಆದಾಗ ಚಿಕ್ಕ ಚಿಕ್ಕ ಉಂಡೆ ಮಾಡಿ, desiccated coconut powder ಮೇಲೆ ಹೊರಳಿಸಿ, ತಿನ್ನಲು ಕೊಡಿ. ನಾನು ಸ್ವಲ್ಪ ಗೋಡಂಬಿ ಬಾದಾಮಿ ಪುಡಿ ಮಾಡಿ ಸೇರಿಸಿದ್ದೇನೆ ಮೇಲೆ ಉದುರಿಸಲು. ನೀವು ಬೇಕಾದರೆ ಸೇರಿಸಬಹುದು.

Desiccated coconut ಸಿಗದಿದ್ದರೆ ಹಸಿ ಕಾಯಿ ತುರಿ 7 ಅಥವಾ 8 ನಿಮಿಷ ಹುರಿದು ಇದೇ ರೀತಿ ಮಾಡಿ. ಹಣ್ಣು ಹಾಕಿರುವುದರಿಂದ ಆ ದಿನವೇ ತಿನ್ನಬೇಕು. ರುಚಿ ಅದ್ಭುತ, ರಿಚ್ ಆಗಿರುತ್ತದೆ, soft n sweet, ಮಾಡಿ ನೋಡಿ.

ಧನ್ಯವಾದಗಳು 🙏🙏🙏

Leave a Reply

Your email address will not be published.