Oota ಸಾಂಬಾರು ಮತ್ತು ಪಲ್ಯಗಳು

MIX VEG CURRY & GARLIC NAAN ಮಿಕ್ಸ್ ವೆಜ್ ಕರ್ರಿ & ಗಾರ್ಲಿಕ್ ನಾನ್

ಉತ್ತರ ಭಾರತದ ಜನಪ್ರಿಯ ಆಹಾರ! ಎಲ್ಲರಿಗೂ ಇಷ್ಟವಾಗುವ ಆಹಾರ!

ಮಿಕ್ಸ್ ವೆಜ್ ಕರ್ರಿ

ಮಾಡುವ ವಿಧಾನ :-

ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ತಲಾ 50 ಗ್ರಾಂ ನಷ್ಟು ತೊಳೆದು ಸಣ್ಣಗೆ ಹೆಚ್ಚಿ ಬೇಯಿಸಿಡಿ. ಬೀನ್ಸ್, ಗೋಭಿ, ಕ್ಯಾರೆಟ್, ಆಲೂಗೆಡ್ಡೆ, ಕ್ಯಾಪ್ಸಿಕಮ್, ಬಟಾಣಿ ಈ ತರಹದ ತರಕಾರಿಗಳನ್ನು ಹಾಕಬಹುದು!

1 ಟೇಬಲ್ ಚಮಚ ಗಸಗಸೆ, 1 ಟೇಬಲ್ ಚಮಚ ಧನಿಯಾ, 10 ರಿಂದ 12 ಗೋಡಂಬಿ ಸ್ವಲ್ಪ ಹುರಿದು ಬಿಸಿಯಾಗಿದ್ದಾಗಲೇ ನುಣ್ಣಗೆ ಪುಡಿ ಮಾಡಿಡಿ.

4 ಟೇಬಲ್ ಚಮಚ ಕಾಯಿ ತುರಿದಿಡಿ.

1 ಈರುಳ್ಳಿ, 1 ಇಂಚು ಶುಂಠಿ, 1 ಚಿಕ್ಕ ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 4 ಹಸಿ ಮೆಣಸಿನಕಾಯಿ, ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ, ಕಾಯಿ ತುರಿ, ಗಸಗಸೆ ಪುಡಿಯೊಂದಿಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ.

ಬಾಣಲೆಯಲ್ಲಿ 4 ಚಮಚ ತುಪ್ಪ/ ಎಣ್ಣೆ ಹಾಕಿ, ಜೀರಿಗೆ, ಹೆಚ್ಚಿದ ಈರುಳ್ಳಿ, ಚಿಟಿಕೆ ಅರಿಷಿಣ, ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿರಿ.

ನಂತರ ಬೆಂದ ತರಕಾರಿ, ಉಪ್ಪು, ಸ್ವಲ್ಪ ನೀರು ಹಾಕಿ ಕುದಿಯಲು ಇಡಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಮಿಕ್ಸ್ ವೆಜ್ ಕರ್ರಿ ಸವಿಯಲು ಸಿದ್ಧ!

 

ಗಾರ್ಲಿಕ್ ನಾನ್ ಮಾಡುವ ವಿಧಾನ:-

1 ಬಟ್ಟಲು ಮೈದಾ ಹಿಟ್ಟಿಗೆ 1/2 ಟೀ ಚಮಚ ಸಕ್ಕರೆ, 1/2 ಚಮಚ ಬೇಕಿಂಗ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಎಣ್ಣೆ, 4 ಚಮಚ ಗಟ್ಟಿಯಾದ ಮೊಸರು ಹಾಕಿ ಚೆನ್ನಾಗಿ ಕಲೆಸಿ.

ನಂತರ ಬೇಕಾದರೆ ಸ್ವಲ್ಪ ನೀರು ಹಾಕಿ ಮೃದುವಾಗಿ ಹಿಟ್ಟು ಕಲೆಸಿ ಸ್ವಲ್ಪ ಎಣ್ಣೆ ಸವರಿ 1 ಗಂಟೆ ನೆನೆಸಿಡಿ.

 

2 ದೊಡ್ಡ ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಇದಕ್ಕೆ ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲೆಸಿಡಿ.

ಮೈದಾ ಮಿಶ್ರಣದಿಂದ ಚಪಾತಿ ಉಂಡೆಯಷ್ಟು ತೆಗೆದು ಕೊಂಡು ಸ್ವಲ್ಪ ದಪ್ಪಗೆ ನಾನ್ ಲಟ್ಟಿಸಿ. ಮೇಲ್ಭಾಗಕ್ಕೆ ಸ್ವಲ್ಪ ಬೆಳ್ಳುಳ್ಳಿ ತುಂಡುಗಳನ್ನು ಉದುರಿಸಿ ಸ್ವಲ್ಪ ಅದುಮಿಡಿ.

ಲಟ್ಟಿಸಿದ ನಾನ್ ಅನ್ನು ತಲೆ ಕೆಳಗೆ ಮಾಡಿ ಸ್ವಲ್ಪ ನೀರು ಸವರಿ.

  

ಕಬ್ಬಿಣದ ಕಾವಲಿಯ ಮೇಲೆ ನೀರು ಚಿಮುಕಿಸಿದ ಭಾಗವನ್ನು ಹಾಕಿ, ಗುಳ್ಳೆಗಳು ಬಂದ ತಕ್ಷಣವೇ ಕಾವಲಿಯನ್ನು ತಲೆಕೆಳಗೆ ಮಾಡಿ ನಾನ್ ಅನ್ನು ನೇರವಾಗಿ ಒಲೆಯ ಜ್ವಾಲೆಯಲ್ಲಿ ಬೇಯಿಸಿ.

ಕಾವಲಿಯಿಂದ ತೆಗೆದು ಬೆಣ್ಣೆ ಸವರಿ ಮಿಕ್ಸ್ ವೆಜ್ ಕರ್ರಿಯೊಂದಿಗೆ ಸವಿಯಿರಿ.

ನಿಮಗೆ ಬೆಳ್ಳುಳ್ಳಿ ಬೇಡವಾದರೆ ಮೇಲೆ ಹೇಳಿರುವ ರೀತಿಯಲ್ಲಿ ಸಾಧಾರಣ ನಾನ್ ಮಾಡಿ ಸವಿಯಬಹುದು.

ಹಸಿ ಬೆಳ್ಳುಳ್ಳಿ ಇಷ್ಟವಾಗದಿನದರೆ ಸ್ವಲ್ಪ ಎಣ್ಣೆ ಹಾಕಿ ಹುರಿದು ಹಾಕಬಹುದು!

ಈ ತರಹ ರೆಸಿಪಿ ಮಾಡಲು ನಾನ್ ಸ್ಟಿಕ್ ತವಾ ಉಪಯೋಗಿಸಬಾರದು! ಕಬ್ಬಿಣದ ಅಥವಾ ಹಿಂಡಾಲಿಯಮ್ ತವಾ ಆದರೆ ಒಳ್ಳೆಯದು!

ಧನ್ಯವಾದಗಳು

Leave a Reply

Your email address will not be published.