ಬಾದಾಮಿ ತನ್ನಲ್ಲಿ ಅಪಾರವಾದ ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿದೆ. ಮಕ್ಕಳಿಗೆ ಬಾದಾಮಿ ತಿನ್ನಲು ಕೊಟ್ಟರೆ ಅವರು ತಿನ್ನುವುದಿಲ್ಲ! ಹೀಗೆ ಮಾಡಿ ನೋಡಿ! ಬಾದಾಮಿ ತಿಂದ ಹಾಗಾಯಿತು! ಹಾಲೂ ಕುಡಿದ ಹಾಗಾಯಿತು! ಬೇಸಿಗೆಯಲ್ಲಿ ತಂಪಾದ ಪಾನೀಯ!
ಮಾಡುವ ವಿಧಾನ:-
20 ರಿಂದ 25 ಬಾದಾಮಿ ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಡಿ.

2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕೇಸರಿ ದಳಗಳನ್ನು ನೆನೆಸಿಡಿ.
ರುಬ್ಬಿದ ಮಿಶ್ರಣಕ್ಕೆ ಕೇಸರಿ ನೆನೆಸಿದ ಹಾಲು, ಚಿಟಿಕೆ ಏಲಕ್ಕಿ ಪುಡಿ, 1/2 ಲೀಟರ್ ಕಾಯಿಸಿ ತಣ್ಣಗಾದ ಹಾಲು, ಸಕ್ಕರೆ ಸೇರಿಸಿ ಚೆನ್ನಾಗಿ ಕಲೆಸಿ ಫ್ರಿಡ್ಜ್ ನಲ್ಲಿಟ್ಟು ಕುಡಿಯಿರಿ.

ನಾನು ಸಿಹಿಗೆ ಕೆಂಪು ಕಲ್ಲು ಸಕ್ಕರೆ ಹಾಕಿದ್ದೇನೆ. ನೀವು ಬೇಕಾದರೆ ಜೇನುತುಪ್ಪ, ಬೆಲ್ಲ ಹಾಕಬಹುದು!
ಧನ್ಯವಾದಗಳು![]()
![]()
![]()