ತಂಪು ಪಾನೀಯಗಳು

AMLA JUICE ಆಮ್ಲಾ ಜ್ಯೂಸ್

ಆಮ್ಲಾ ಅಂದರೆ ಬೆಟ್ಟದ ನೆಲ್ಲಿಕಾಯಿ ಆರೋಗ್ಯಕ್ಕೆ ಒಳ್ಳೆಯದು! ವಿಟಮಿನ್ ‘ಸಿ’ ಬೆಟ್ಟದಷ್ಟು ತುಂಬಿದೆ. ಇದರ ರುಚಿಯಾದ ಜ್ಯೂಸ್ ಮಾಡುವ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

2 ಅಥವಾ 3 ಬೆಟ್ಟದ ನೆಲ್ಲಿಕಾಯಿ ತೊಳೆದು ಸಣ್ಣಗೆ ಹೆಚ್ಚಿ ಬೀಜ ತೆಗೆದು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಶೋಧಿಸಿ.

ಚಿಟಿಕೆ ಉಪ್ಪು, 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲೆಸಿ ತಕ್ಷಣ ಕುಡಿಯಿರಿ.

 

ಅಥವಾ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಬೇಕಾದರೂ ಹಾಕಿಕೊಳ್ಳಬಹುದು.

ಧನ್ಯವಾದಗಳು

Leave a Reply

Your email address will not be published.