ಬೂದು ಕುಂಬಳಕಾಯಿ ತನ್ನ ಗಾತ್ರಕ್ಕೆ ತಕ್ಕಂತೆ ತನ್ನಲ್ಲಿ ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿದೆ. ಪ್ರತಿದಿನ ಈ ತರಕಾರಿಯನ್ನು ತಿನ್ನುತ್ತಾ ಬಂದರೆ ಮಕ್ಕಳಿಗೆ ಙಾಪಕ ಶಕ್ತಿ ಹೆಚ್ಚಾಗುತ್ತದೆ! ಬೊಜ್ಜು ದೇಹ ಕರಗುತ್ತದೆ. ಸಾಧಾರಣವಾಗಿ SSY YOGA ಕ್ಲಾಸ್ ಗಳಿಗೆ ಹೋದವರಿಗೆ ಇದರ ಮಹತ್ವ ಗೊತ್ತಿರುತ್ತದೆ. ಈ ಕಾಯಿಯನ್ನು ಹಸಿಯಾಗಿ ಬಳಸಿದರೆ ಆರೋಗ್ಯ ಮತ್ತಷ್ಟು ವೃದ್ಧಿಸುತ್ತದೆ.
ಇದರ ಜ್ಯೂಸ್ ಬೆಳಿಗ್ಗೆ ಎದ್ದೊಡನೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಕ್ರಮೇಣ ದೇಹದ ತೂಕ ಕಡಿಮೆಯಾಗುತ್ತದೆ. ಇದರ ಜ್ಯೂಸ್ ಕುಡಿದ ಎರಡು ಗಂಟೆ ಕಾಲ ಬೇರೆ ಏನೂ ಸೇವಿಸದಿದ್ದರೆ ಇದರ ಪರಿಣಾಮ ಹೆಚ್ಚು. ಮಾಡುವುದು ಸುಲಭ! ಆರೋಗ್ಯಕರ!
ಮಾಡುವ ವಿಧಾನ:-
ಸುಮಾರು 100 ಗ್ರಾಂನಷ್ಟು ಚೆನ್ನಾಗಿ ಬಲಿತ ಬೂದು ಕುಂಬಳದ ಕಾಯಿ ತೊಳೆದು ಸಿಪ್ಪೆ, ಬೀಜ ತೆಗೆದು ನುಣ್ಣಗೆ ರುಬ್ಬಿ ಶೋಧಿಸಿ ಕೊಳ್ಳಿ.

ಈ ರಸಕ್ಕೆ ಬೇರೆ ಏನೂ ಸೇರಿಸದೆ ಹಾಗೆ ಕುಡಿದರೆ ಒಳ್ಳೆಯದು. ಅಥವಾ ಸ್ವಲ್ಪ ರುಚಿ ಬೇಕಾದರೆ ಸ್ವಲ್ಪ ನಿಂಬೆ ರಸ, ಚಿಟಿಕೆ ಉಪ್ಪು ಸೇರಿಸಿ ಕುಡಿಯಬಹುದು. ಅಥವಾ ಜೇನುತುಪ್ಪ ಸೇರಿಸಿ ಕುಡಿಯಬಹುದು.
ಪ್ರತಿದಿನ ಬೆಳಿಗ್ಗೆ ಎದ್ದೊಡನೆ ಕುಡಿಯುತ್ತಾ ಬನ್ನಿ. ನಿಮ್ಮ ದೇಹದ ತೂಕ ಕಡಿಮೆ ಆಗುತ್ತದೆ. ಜೊತೆಗೆ ಸ್ವಲ್ಪ ವ್ಯಾಯಾಮ ಮತ್ತು ಡಯಟ್ ಕಡೆ ಗಮನ ಹರಿಸಿದರೆ ಬೇಗ ಪಲಿತಾಂಶ ಸಿಗುತ್ತದೆ.
ಧನ್ಯವಾದಗಳು ![]()
![]()
![]()