KAMARKUT / KALKONA ಕಮರ್ ಕಟ್ / ಕಲ್ಕೋನ
ಬೆಲ್ಲ ಮತ್ತು ಕಾಯಿತುರಿಯ ಸವಿಯಾದ ರೆಸಿಪಿ. ಇದು ನಮ್ಮ ಅತ್ತೆಯ ತಾಯಿ ಅಂದರೆ ನನ್ನ ಪತಿಯ ಅಜ್ಜಿ ಮಾಡುತ್ತಿದ್ದ ಸಿಹಿ ರೆಸಿಪಿ!
ಮಾಡುವ ವಿಧಾನ :-
ಒಂದು ಅಳತೆ ಬೆಲ್ಲ ಪುಡಿ ಮಾಡಿಡಿ. ಒಂದು ಅಳತೆ ಕಾಯಿ ತುರಿದಿಡಿ. ಎರಡು ಏಲಕ್ಕಿ ಬೇಕಾದರೆ ಪುಡಿ ಮಾಡಿಡಿ.



ದಪ್ಪ ತಳದ ಬಾಣಲೆಯಲ್ಲಿ ಬೆಲ್ಲದ ಪುಡಿ ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಕಡಿಮೆ ಉರಿಯಲ್ಲಿ ಕಲೆಸುತ್ತಿರಿ. ಬೆಲ್ಲದ ಪಾಕ ಗಟ್ಟಿಯಾದಾಗ ಸ್ಪಲ್ಪ ಪಾಕ ತೆಗೆದು ನೀರಿನಲ್ಲಿ ಹಾಕಿ ನೋಡಿ.

ಆಗ ಪಾಕ ನೀರಿನಲ್ಲಿ ಕದಡದೆ ಗಟ್ಟಿಯಾದ ಉಂಡೆಯ ಹಾಗೆ ಕೈಗೆ ಬರುವ ಹದ ಬಂದಾಗ, ಕಾಯಿ ತುರಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ.

ಮಿಶ್ರಣ ಬಾಣಲೆಯ ಅಂಚು ಬಿಡುತ್ತಾ ಒಂದೇ ಉಂಡೆಯಂತೆ ಆದಾಗ ಒಲೆಯಿಂದ ಕೆಳಗಿಳಿಸಿ, ಬೆಚ್ಚಗಾದಾಗ ಸ್ವಲ್ಪ ತುಪ್ಪ ಸವರಿ ನಿಮಗೆ ಬೇಕಾದ ಅಳತೆಯ ಉಂಡೆ ಮಾಡಿ ಸವಿಯಿರಿ.

ಈ ಉಂಡೆ ಗಟ್ಟಿಯಾಗಿರುವುದರಿಂದ ಇದಕ್ಕೆ ಕಲ್ಕೋನಾ ಅಂತ ಕೂಡ ಕರೆಯುತ್ತಾರೆ. ತಿನ್ನಲು ಚಾಕೊಲೇಟ್ ಹಾಗಿರುವ ಈ ಸಿಹಿ ಮಕ್ಕಳಿಗೆ ಸಹ ಆರೋಗ್ಯಕ್ಕೆ ಒಳ್ಳೆಯದು.

ಧನ್ಯವಾದಗಳು 🙏🙏🙏
