ಫಿರ್ನಿ ಉತ್ತರ ಭಾರತದ ಜನಪ್ರಿಯ ಸಿಹಿ! ಈ ಜನಪ್ರಿಯ ಸಿಹಿಗೆ ಹಣ್ಣಿನ ರಾಜ ಮಾವಿನ ಹಣ್ಣು ಸೇರಿಸಿದರೆ ಹೇಗಿರುತ್ತದೆ ಎಂದು ತಿಳಿಯಬೇಕಾದರೆ ಈ ರೆಸಿಪಿ ಮಾಡಿ ನೋಡಿ!
ಮಾಡುವ ವಿಧಾನ :-
1 ಟೇಬಲ್ ಚಮಚ ಬಾಸುಮತಿ ಅಕ್ಕಿ ತೊಳೆದು 2 ಗಂಟೆ ನೆನೆಸಿ, ನಂತರ ತರಿ ತರಿಯಾಗಿ ರುಬ್ಬಿಡಿ.
4 ಮಾವಿನ ಹಣ್ಣಿನ ರಸ ತೆಗೆದಿಡಿ.

ಸ್ವಲ್ಪ ಬಾದಾಮಿ, ಗೋಡಂಬಿ ಸಣ್ಣಗೆ ಹೆಚ್ಚಿಡಿ. 4 ಏಲಕ್ಕಿ ಪುಡಿ ಮಾಡಿಡಿ.
1 ಲೀಟರ್ ಗಟ್ಟಿಯಾದ ಹಾಲು, ದಪ್ಪ ತಳದ ಪಾತ್ರೆಯಲ್ಲಿ ಕಾಯಲು ಇಡಿ. ಹಾಲು ಚೆನ್ನಾಗಿ ಕುದಿದು ಅರ್ಧದಷ್ಟು ಆದಾಗ ರುಬ್ಬಿದ ಬಾಸುಮತಿ ಅಕ್ಕಿ ಮಿಶ್ರಣವನ್ನು ಹಾಕಿ.
ಉರಿ ಸಂಪೂರ್ಣವಾಗಿ ಕಡಿಮೆ ಮಾಡಿ, 4 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ ( ನಾನು ಸಕ್ಕರೆ ಬದಲಿಗೆ Sugar Free Natura ಹಾಕಿದ್ದೇನೆ. ಹಾಗಾಗಿ ಈ ಸಿಹಿಯನ್ನು ಡಯಟ್ ಮಾಡುವವರು ಮತ್ತು ಮಧು ಮೇಹಿಗಳೂ ಸಹ ಸ್ವಲ್ಪ ಪ್ರಮಾಣದಲ್ಲಿ ಸೇವಿಸಬಹುದು!) ಆಗಾಗ ಹಾಲಿನ ಮಿಶ್ರಣವನ್ನು ಕಲೆಸುತ್ತಿರಬೇಕು. ಅಕ್ಕಿ ರುಬ್ಬಿ ಹಾಕಿರುವುದರಿಂದ ಗಂಟಾಗುವ ಸಾಧ್ಯತೆಯಿದೆ.

ಕೊನೆಯಲ್ಲಿ ಮಾವಿನ ಹಣ್ಣಿನ ರಸ ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ.
ಸಣ್ಣಗೆ ಹೆಚ್ಚಿದ ಬಾದಾಮಿ, ಗೋಡಂಬಿ, ಏಲಕ್ಕಿ ಪುಡಿ ಹಾಕಿ ತಣ್ಣಗಾದ ಮೇಲೆ Fridge ನಲ್ಲಿ ಇಟ್ಟು ನಂತರ ಸವಿಯಿರಿ!

ಮಾವಿನ ಹಣ್ಣಿನಲ್ಲಿ ಸಿಹಿ ಅಂಶ ಹೆಚ್ಚಾಗಿರುವುದರಿಂದ ಸಕ್ಕರೆ ನೋಡಿ ಕೊಂಡು ಹಾಕಿ.
ಧನ್ಯವಾದಗಳು![]()
![]()
![]()