ಬಾದಾಮಿಯಿಂದ ಮಾಡಬಹುದಾದ ರುಚಿಯಾದ ಬರ್ಫಿಯ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ :-
ಒಂದು ಅಳತೆ ಬಾದಾಮಿಯನ್ನು ಬಿಸಿ ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ನುಣ್ಣಗೆ ಪುಡಿ ಮಾಡಿಡಿ. ನೀರು ಹಾಕಬಾರದು.

ಒಂದು ಅಳತೆ ಸಕ್ಕರೆಗೆ ಅರ್ಧ ಅಳತೆ ನೀರು ಸೇರಿಸಿ ಕುದಿಯಲು ಇಡಿ.

ಸಕ್ಕರೆ ಪೂರ್ತಿಯಾಗಿ ಕರಗಿ ಒಂದೆಳೆ ಪಾಕ ಬಂದೊಡನೆ ಬಾದಾಮಿ ಪುಡಿ ಸೇರಿಸಿ ಗಂಟಿಲ್ಲದ ಹಾಗೆ ಚೆನ್ನಾಗಿ ಕಲೆಸಿ.

ಎರಡು ಚಮಚ ತುಪ್ಪ ಹಾಕಿ ಕಲೆಸುತ್ತಾ ಇರಿ. ಮಿಶ್ರಣ ಗಟ್ಟಿಯಾಗಿ ಅಂಚನ್ನು ಬಿಡುತ್ತಾ ಬಂದಾಗ ಒಲೆಯಿಂದ ತೆಗೆದು ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ!
ಧನ್ಯವಾದಗಳು ![]()
![]()
![]()
