ಇದು ಬಹಳ ಹಳೆಯ ರೆಸಿಪಿ! ನಮ್ಮ ಅಜ್ಜಿ ಮಾಡುತ್ತಿದ್ದ ವಿಧಾನ! 10 ರಿಂದ 15 ನಿಮಿಷದಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ!
ಮಾಡುವ ವಿಧಾನ:-
1 ಅಳತೆ ಬೆಲ್ಲವನ್ನು ಪುಡಿ ಮಾಡಿ, 1 ಅಳತೆ ನೀರು ಹಾಕಿ ಕುದಿಯಲು ಇಡಿ.
ಸ್ವಲ್ಪ ಡ್ರೈ ಫ್ರೂಟ್ಸ್ ಅನ್ನು ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ.

ಬಾಣಲೆಯಲ್ಲಿ 1/2 ಅಳತೆ ತುಪ್ಪ ಹಾಕಿ ಡ್ರೈ ಫ್ರೂಟ್ಸ್ ಹಾಕಿ ಹುರಿದು ತೆಗೆದಿಡಿ.
ಅದೇ ಬಾಣಲೆಯಲ್ಲಿ 1 ಅಳತೆ ಗೋಧಿ ಹಿಟ್ಟು, ಸ್ವಲ್ಪ ಕೇಸರಿ ದಳ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ ಘಮ್ ಎಂದು ವಾಸನೆ ಬರುವವರೆಗೆ ಹುರಿಯಿರಿ.

ಬೆಲ್ಲ ಕರಗಿದ ಮೇಲೆ ಗೋಧಿ ಹಿಟ್ಟಿನ ಮಿಶ್ರಣಕ್ಕೆ ಬೆಲ್ಲದ ನೀರು ಸೋಸಿ ಹಾಕಿ. ಹುರಿದ ಡ್ರೈ ಫ್ರೂಟ್ಸ್, ಚಿಟಿಕೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ 4 ರಿಂದ 5 ನಿಮಿಷ ಬೇಯಿಸಿ.
ನಂತರ ತುಪ್ಪ ಸವರಿದ ತಟ್ಟೆಗೆ ಹಾಕಿ ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ!

ನೀವು ಹೆಚ್ಚು ಸಿಹಿ ಇಷ್ಟ ಪಡುವವರಾದರೆ ಬೆಲ್ಲ ಇನ್ನೂ ಸ್ವಲ್ಪ ಹೆಚ್ಚು ಹಾಕಿ ಮಾಡಬಹುದು!
ಸುಲಭವಾಗಿ ಮಾಡಬಹುದಾದ, ಆರೋಗ್ಯಕರವಾದ ಈ ರೆಸಿಪಿ ಖಂಡಿತಾ ಟ್ರೈ ಮಾಡ್ತೀರಾ ಅಲ್ಲವೇ!?
ಧನ್ಯವಾದಗಳು ????????