ಕಾಬೂಲ್ ಕಡಲೇ ಕಾಳಿನ ರುಚಿಯಾದ ರೆಸಿಪಿ ಇಲ್ಲಿದೆ! ಸಂಜೆ ಕಾಫಿ ಜೊತೆಗೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ!
ಮಾಡುವ ವಿಧಾನ:-
ನಿಮಗೆ ಬೇಕಾಗುವಷ್ಟು ಕಾಬೂಲ್ ಕಡಲೇ ಕಾಳನ್ನು ರಾತ್ರಿ ಪೂರ ನೆನೆಸಿ, ಬೆಳಿಗ್ಗೆ ಸ್ವಲ್ಪ ಉಪ್ಪು ಹಾಕಿ 1 ವಿಷಲ್ ಕೂಗಿಸಿಡಿ.

ಹೆಚ್ಚಿನ ನೀರು ತೆಗೆದು ಬೆಂದ ಕಾಳಿಗೆ 1 ಚಮಚ ಅಕ್ಕಿ ಹಿಟ್ಟು, 1 ಚಮಚ ಕಾರ್ನ್ ಫ್ಲೋರ್, ಉಪ್ಪು, 1 ಚಮಚ ಖಾರದ ಪುಡಿ, ಚಿಟಿಕೆ ಅರಿಷಿಣ, 1/2 ಚಮಚ ಚಾಟ್ ಮಸಾಲ ಹಾಕಿ ಚೆನ್ನಾಗಿ ಕಲೆಸಿ.

ಕಾದ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪವೇ, ಬಿಡಿ ಬಿಡಿಯಾಗಿ ಹಾಕುತ್ತಾ ಕಡಿಮೆ ಉರಿಯಲ್ಲಿ ಗರಿ ಗರಿಯಾಗುವಂತೆ ಕರಿದರೆ ರುಚಿಯಾದ ಕ್ರಿಸ್ಪಿ ಚನ್ನಾ ಸವಿಯಲು ಸಿದ್ಧ!
ಧನ್ಯವಾದಗಳು![]()
![]()
![]()