Kannada ಸಾಂಬಾರು ಮತ್ತು ಪಲ್ಯಗಳು

CHILLI PICKLE ಚಿಲ್ಲಿ ಪಿಕಲ್

ಉಪ್ಪಿನಕಾಯಿ ಪ್ರಿಯರೆ ನಿಮಗಾಗಿ ಇಲ್ಲಿದೆ ನಿಮಗಾಗಿ ಸುಲಭವಾಗಿ ಮಾಡಬಹುದಾದ ಒಂದು ಮೆಣಸಿನಕಾಯಿ ಉಪ್ಪಿನಕಾಯಿಯ ರೆಸಿಪಿ!

ಮಾಡುವ ವಿಧಾನ:-

100 ಗ್ರಾಂ ಸಣ್ಣಗೆ ಉದ್ದಕ್ಕೆ ಖಾರಾ ಕಡಿಮೆ ಇರುವ ಹಸಿರು ಮೆಣಸಿನಕಾಯಿ ಆರಿಸಿ ಕೊಳ್ಳಿ! ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿ 1 ಇಂಚು ಉದ್ದದ ತುಂಡುಗಳನ್ನಾಗಿ ಹೆಚ್ಚಿಡಿ.

  

2 ಟೀ ಚಮಚ ಸಾಸಿವೆ, 1 ಟೀ ಚಮಚ ಮೆಂತ್ಯ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.

  

6 ಚಮಚ ಎಣ್ಣೆ ಚಿಕ್ಕ ಬಾಣಲೆಯಲ್ಲಿ ಬಿಸಿಯಾಗಲು ಇಡಿ. 1/2 ಚಮಚ ಇಂಗಿನ ಪುಡಿ, ಚಿಟಿಕೆ ಅರಿಷಿಣ ಹಾಕಿ ಹೆಚ್ಚಿದ ಮೆಣಸಿನಕಾಯಿಗೆ ಹಾಕಿ.

ಮೆಂತ್ಯ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1 ಟೇಬಲ್ ಚಮಚ ವಿನೆಗರ್ ಹಾಕಿ ಚೆನ್ನಾಗಿ ಕಲೆಸಿ ಗಾಜಿನ ಬಾಟಲಿನಲ್ಲಿ ತುಂಬಿ Fridge ನಲ್ಲಿ ಎರಡು ದಿನ ಇಡಿ. ಆಗಾಗ ಕಲೆಸುವುದನ್ನು ಮರೆಯಬೇಡಿ.

  

ಎರಡು ದಿನಗಳ ನಂತರ ಮೆಣಸಿನಕಾಯಿ ಸ್ವಲ್ಪ ಮೆತ್ತಗೆ ಆದ ಮೇಲೆ ಊಟದಲ್ಲಿ ಬಳಸಬಹುದು.

ಇದು ದಿಢೀರ್ ಉಪ್ಪಿನಕಾಯಿ! Fridge ನಲ್ಲಿಟ್ಟು ಬೇಕಾದಾಗ ಉಪಯೋಗಿಸಬಹುದು.

ಮಾಡುವುದು ಸುಲಭ! ಎಷ್ಟು ಬೇಕೋ ಅಷ್ಟು ಆಗಾಗ ಮಾಡಿಕೊಳ್ಳಬಹುದು!

ಧನ್ಯವಾದಗಳು

Leave a Reply

Your email address will not be published.